ತಲೆಯಲ್ಲಿ ಹೇನು ಅದರಲ್ಲೂ ಮಕ್ಕಳ ತಲೆಯಲ್ಲಿ ಹೇನಿನ ಸಮಸ್ಯೆ ಸರ್ವೇ ಸಾಮಾನ್ಯ. ತಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹೇನಿನ ಸಮಸ್ಯೆ ನಿವಾರಿಸಬಹುದು. ಇದಕ್ಕೆ, ಕೆಲವು ಮನೆಮದ್ದುಗಳು ಕೂಡ ಸಹಕಾರಿ ಆಗಿವೆ.
ಐದಾರು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ, 2-3 ಟೀ ಸ್ಪೂನ್ ಲೆಮನ್ ಜ್ಯೂಸ್ ಮಿಕ್ಸ್ ಮಾಡಿ ನೆತ್ತಿಯ ಮೇಲೆ ಅನ್ವಯಿಸಿ. ಅರ್ಧಗಂಟೆ ನಂತರ ನೀವು ತಡೆಯುವಷ್ಟು ಬಿಸಿ ನೀರಿನಿಂದ ಹೇರ್ ವಾಶ್ ಮಾಡಿ.
ರಾತ್ರಿ ಮಲಗುವ ಮುನ್ನ ಕೂದಲಿಗೆ ಚೆನ್ನಾಗಿ ಆಲಿವ್ ಆಯಿಲ್ ಹಚ್ಚಿ ಮಸಾಜ್ ಮಾಡಿ ತಲೆಗೆ ಶವರ್ ಕ್ಯಾಪ್/ಟವಲ್ ಹಾಕಿ. ಬೆಳಿಗ್ಗೆ ಟೀ ಟ್ರೀ ಆಯಿಲ್ ಶಾಂಪೂವಿನಿಂದ ಹೇರ್ ವಾಶ್ ಮಾಡಿದರೆ ಹೇನು ನಿವಾರಣೆಯಾಗುತ್ತದೆ.
ಆಪಲ್ ಸೈಡರ್ ವಿನೆಗರ್ ನಲ್ಲಿ ನೀರನ್ನು ಮಿಶ್ರಣ ಮಾಡಿ ಕೂದಲಿಗೆ ಸಿಂಪಡಿಸಿ. ಬಳಿ ಶವರ್ ಕ್ಯಾಪ್ ಹಾಕಿ ಒಂದೆರಡು ಗಂಟೆ ಹಾಗೆ ಬಿಡಿ. ನಂತರ ಹೇರ್ ವಾಶ್ ಮಾಡಿ. ಕಂಡೀಷನರ್ ಅನ್ವಯಿಸಿ.
ನೈಸರ್ಗಿಕ ಶಾಂಪೂವಿನಲ್ಲಿ ಒಂದು ಸ್ಪೂನ್ ಟೀ ಟ್ರೀ ಆಯಿಲ್, ತೆಂಗಿನೆಣ್ಣೆ, ಆಲಿವ್ ಎಣ್ಣೆ ಬೆರೆಸಿ. ಇದನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಅರ್ಧಗಂಟೆ ಬಳಿಕ ಹೇರ್ ವಾಶ್ ಮಾಡಿ.
ಈರುಳ್ಳಿ ರಸವನ್ನು ಕೂದಲಿನ ಬುಡದಿಂದ ಹಚ್ಚಿ ಸುಮಾರು 3-4 ಗಂಟೆಗಳ ಬಳಿಕ ಕೂದಲನ್ನು ಬಾಚಿ ಹೇನುಗಳನ್ನು ತೆಗೆಯಿರಿ. ನಂತರ ಹೇರ್ ವಾಶ್ ಮಾಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.