ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರೂ ಗೂಗಲ್ ಬಳಸುತ್ತಾರೆ. ಇಲ್ಲಿ ಅನೇಕ ವಿಚಾರದ ಬಗ್ಗೆ ಮಾಹಿತಿ ಪಡೆಯುತ್ತಾರೆ.
ಆದರೆ ಮಹಿಳೆಯರ ಯಾವ ವಿಚಾರಗಳ ಬಗ್ಗೆ ಪುರುಷರು ಗೂಗಲ್ನಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ ಗೊತ್ತಾ?
ವರದಿಯ ಪ್ರಕಾರ, ಪುರುಷರು ಅತಿ ಹೆಚ್ಚು ಹುಡುಕುವ ವಿಷಯಗಳಲ್ಲಿ ಒಂದು ಲೈಂಗಿಕತೆ.
ಹುಡುಗಿಯರ ಕೆಲ ವಿಚಾರಗಳ ಬಗ್ಗೆ ಸಹ ಪುರುಷರು ಗೂಗಲ್ನಲ್ಲಿ ಸರ್ಚ್ ಮಾಡುತ್ತಾರೆ.
ಹೆಚ್ಚಾಗಿ ಪುರುಷರು ಸ್ತನ ಕ್ಯಾನ್ಸರ್ ಬಗ್ಗೆ ಸರ್ಚ್ ಮಾಡುತ್ತಾರೆ ಎಂದು ಬಹಿರಂಗವಾಗಿದೆ.
ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯ ಕಾಯಿಲೆ ಆಗಿದೆ. ಆದರೆ ಪುರುಷರಿಗೆ ಸ್ತನ ಕ್ಯಾನ್ಸರ್ ಬರುತ್ತದೆಯೇ ಎಂದು ಹುಡುಗರು ಹೆಚ್ಚಾಗಿ ಸರ್ಚ್ ಮಾಡುತ್ತಾರಂತೆ.
ಇದಲ್ಲದೇ ಕ್ಷೌರ ಮಾಡುವುದರಿಂದ ಗಡ್ಡ, ಕೂದಲು ಹೆಚ್ಚು ಬೆಳೆಯುತ್ತದೆಯೇ? ಎಂದು ಹುಡುಕುತ್ತಾರೆ.
ಗಡ್ಡವನ್ನು ದಪ್ಪವಾಗಿಸುವ ಮಾರ್ಗಗಳು ಯಾವುವು? ಹೀಗೆ ತಮ್ಮ ಬ್ಯೂಟಿ ಬಗ್ಗೆ ಸಹ ಅನೇಕ ವಿಚಾರಗಳನ್ನು ಹುಡುಗರು ಗೂಗಲ್ನಲ್ಲಿ ಸರ್ಚ್ ಮಾಡುತ್ತಾರೆ.
ಟೋಪಿ ಧರಿಸುವುದರಿಂದ ಕೂದಲಿಗೆ ಹಾನಿಯಾಗುತ್ತದೆಯೇ? ಎಂದು ಹೇರ್ ಕೇರ್ ಬಗ್ಗೆಯೂ ಹುಡುಕುತ್ತಾರೆ.
ವರ್ಕೌಟ್ ದಿನಚರಿ, ಬಾಡಿ ಬಿಲ್ಡಿಂಗ್ ಹೇಗೆ ಮಾಡಬೇಕು? ಎಂಬ ಬಗ್ಗೆ ಸಹ ಹುಡುಗರು ಗೂಗಲ್ ಸರ್ಚ್ ಮಾಡುತ್ತಾರಂತೆ.