ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಪಾನೀಯಗಳನ್ನು ಸೇವಿಸುವ ಮೂಲಕ ಕೂದಲು ಉದ್ದನೆ ಬೆಳೆಯುವಂತೆ ಮಾಡಬಹುದು.
ಆಲೋವಿರಾ ಜ್ಯೂಸ್ ಕೂದಲು ಉದುರುವುದನ್ನು ತಡೆಯುತ್ತದೆ. ಇದು ಕೂದಲನ್ನು ಬಲಪಡಿಸುವ ವಿಟಮಿನ್ ಅನ್ನು ಹೊಂದಿದೆ.
ಕಿವಿ ಜ್ಯೂಸ್ ನಲ್ಲಿ ವಿಟಮಿನ್ ಇ ಸಮೃದ್ದವಾಗಿದೆ. ಇದು ಕೂದಲ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪೇರಳೆ ಹಣ್ಣಿನ ಜ್ಯೂಸ್ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ದವಾಗಿದೆ. ಕ್ಯಾಲ್ಷಿಯಂ, ಕಬ್ಬಿಣ, ಫೋಲಿಕ್ ಆಮ್ಲ ಮುಂತಾದ ಪೋಷಕಾಂಶಗಳನ್ನು ಇದು ಹೊಂದಿದೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ.
ಸೌತೆಕಾಯಿ ಜ್ಯೂಸ್ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ.
ಕೊತ್ತಂಬರಿ ಸೊಪ್ಪು ಕೂದಲಿನ ಬೆಳವಣಿಗೆ ಹೆಚ್ಚಿಸಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಕ್ಯಾರೆಟ್ ಜ್ಯೂಸ್ ಪೌಷ್ಟಿಕಾಂಶದಿಂದ ಕೂಡಿದೆ. ಬೀಟಾ ಕ್ಯಾರೆತಿನಿದರಲ್ಲಿ ಸಮೃದ್ದವಾಗಿದೆ. ಇದು ಕೂದಲಿಗೆ ಹೊಳಪು ಮತ್ತು ಅತ್ಯುತ್ತಮ ಬಣ್ಣವನ್ನು ನೀಡುತ್ತವೆ.
ಸ್ಟ್ರಾಬೆರಿ ವಿಟಮಿನ್ ಸಿಯನ್ನು ಹೊಂದಿದೆ. ಇದು ದೇಹದಲ್ಲಿ ಪ್ರೋಟೀನ್ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಈ ಆರೋಗ್ಯಕರ ಪಾನೀಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಕೂದಲಿನ ಆರೋಗ್ಯವನ್ನು ಕಾಪಾಡಬಹುದು.