ತುಳಸಿ ಸಸ್ಯವನ್ನು ಪೂಜನೀಯ ಸಸ್ಯ ಎಂದು ಪರಿಗಣಿಸಲಾಗಿದ್ದು, ಮನೆಯಲ್ಲಿ ತುಳಸಿ ಒಣಗುವುದು ದುರದೃಷ್ಟ, ಕೆಟ್ಟ ಸಮಯದ ಸಂಕೇತ ಎನ್ನಲಾಗುತ್ತದೆ.
ತುಳಸಿ ಗಿಡ ಒಣಗಲು ಹಲವು ಕಾರಣಗಳಿವೆ. ಆದರೆ, ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ತುಳಸಿ ಸಸ್ಯ ಒಣಗುವುದನ್ನು ತಪ್ಪಿಸಬಹುದು.
ಮನೆಯಲ್ಲಿರುವ ತುಳಸಿ ಗಿಡ ಒಣಗಳು ಮಣ್ಣು ಪ್ರಮುಖ ಕಾರಣ. ಮಣ್ಣು ಜಿಗುಟಾಗಿದ್ದು ಅದರಲ್ಲಿ ಕೀಟಗಳಿದ್ದರೆ ಕೂಡಲೇ ಅದನ್ನು ಬದಲಾಯಿಸಿ.
ಮನೆಯಲ್ಲಿರುವ ತುಳಸಿ ಸಸ್ಯ ಹಚ್ಚ ಹಸಿರಾಗಿರಲು ಹಸಿ ಹಾಲನ್ನು ಸಿಂಪಡಿಸಿ. ಇದರಿಂದ ಕ್ರಿಮಿಕೀಟಗಳು ನಾಶವಾಗುತ್ತವೆ. ಈ ಕಾರಣಕ್ಕಾಗಿಯೇ, ತುಳಸಿ ಪೂಜೆ ವೇಳೆ ಹಸಿ ಹಾಲನ್ನು ಹಾಕಲಾಗುತ್ತದೆ.
ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಇದು ತಣ್ಣಗಾದ ನಂತರ ಈ ನೀರನ್ನು ತುಳಸಿ ಗಿಡಕ್ಕೆ ಸಿಂಪಡಿಸುವುದರಿಂದ ತುಳಸಿ ಸಸ್ಯಕ್ಕೆ ಮತ್ತೆ ಜೀವಕಳೆ ತುಂಬುತ್ತದೆ.
ತುಳಸಿ ಸಸ್ಯಕ್ಕೆ ನಿತ್ಯ ನೀರು ಹಾಕಿ ಆರೈಕೆ ಮಾಡಬೇಕು. ಇದರ ಹೊರತಾಗಿ ಆಗಾಗ್ಗೆ ಇತರ ಗಿಡಗಳಿಗೆ ಬಳಸುವಂತೆ ತುಳಸಿ ಸಸ್ಯಕ್ಕೂ ಗೊಬ್ಬರ ಬಳಸಬೇಕು.
ಇದು ಮಳೆಗಾಲವಾದ್ದರಿಂದ ತುಳಸಿ ಕುಂಡದಲ್ಲಿ ನೀರು ನಿಲ್ಲುವುದು ಸಹಜ. ಆದರೆ, ಹೆಚ್ಚುವರಿ ನೀರಿನಿಂದ ತುಳಸಿ ಸಸ್ಯ ಹಾಳಾಗುತ್ತದೆ. ಇದನ್ನು ತಪ್ಪಿಸಲು ತುಳಸಿ ಬೆಳೆಸಿರುವ ಕುಂಡದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ.
ತುಳಸಿ ಬೆಳವಣಿಗೆಗೆ ಸೂರ್ಯನ ಬೆಳಕು ಅವಶ್ಯಕ. ಇದಕ್ಕಾಗಿ ಸೂರ್ಯನ ಮಂದ ಬೆಳಕಿದ್ದರೆ ಸಾಕು. ಆದರೆ, ತುಳಸಿ ಸಸ್ಯವನ್ನು ಅತಿಯಾದ ಬಿಸಿಲಿರುವ ಜಾಗದಲ್ಲಿ ಇಡಬೇಡಿ.ಇದರಿಂದ ಬಿಸಿಲಿನ ತಾಪಕ್ಕೆ ತುಳಸಿ ಒಣಗಿಹೋಗಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.