ಡಾರ್ಕ್ ಸರ್ಕಲ್ ಸಮಸ್ಯೆಗೆ ನಿಮ್ಮ ಕೈಯಲ್ಲಿಯೇ ಇದೆ ಪರಿಹಾರ

Yashaswini V
Oct 25,2023

ಡಾರ್ಕ್ ಸರ್ಕಲ್

ಡಾರ್ಕ್ ಸರ್ಕಲ್ ಸಮಸ್ಯೆಗೆ ಹಲವು ಕಾರಣಗಳಿವೆ. ಇದನ್ನು ತಪ್ಪಿಸಲು ನೀವು ಕೆಲವು ಸುಲಭ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

ಐರನ್ ಕೊರತೆ

ದೇಹದಲ್ಲಿನ ಐರನ್ ಕೊರತೆಯೇ ಡಾರ್ಕ್ ಸರ್ಕಲ್ ಮೂಡಲು ಬಹು ಮುಖ್ಯ ಕಾರಣವಾಗಿದೆ. ಇದನ್ನು ತಪ್ಪಿಸಲು ಕಬ್ಬಿಣಾಂಶ ಭರಿತ ಆಹಾರಗಳನ್ನು ಸೇವಿಸಿ.

ನಿದ್ರಾಹೀನತೆ

ಇದಲ್ಲದೆ ನಿತ್ಯ ಸಾಕಷ್ಟು ನಿದ್ರೆ ಮಾಡದಿರುವುದರಿಂದಲೂ ಕಣ್ಣಿನ ಸುತ್ತ ಕಪ್ಪಾಗುತ್ತದೆ. ನಿತ್ಯ 7-8 ಗಂಟೆಗಳ ಕಾಲ ನಿದ್ರೆ ಮಾಡಿ.

ಸಾಕಷ್ಟು ನೀರು

ಉತ್ತಮ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ತುಂಬಾ ಅಗತ್ಯ. ಅಂತೆಯೇ, ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಿಸಲು ನೀವು ನಿತ್ಯ ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು.

ಗ್ಯಾಜೆಟ್ಸ್

ರಾತ್ರಿ ವೇಳೆ ಅದರಲ್ಲೂ ಲೈಟ್ಸ್ ಆಫ್ ಮಾಡಿ ಕತ್ತಲೆಯಲ್ಲಿ ಮೊಬೈಲ್, ಲ್ಯಾಪ್ಟಾಪ್ ನಂತಹ ಗ್ಯಾಜೆಟ್ಸ್ ಗಳನ್ನು ನೋಡುವುದನ್ನು ತಪ್ಪಿಸಿ.

ಆಯಾಸ

ಅತಿಯಾದ ಒತ್ತಡ, ಆಯಾಸದಿಂದಲೂ ಡಾರ್ಕ್ ಸರ್ಕಲ್ ಮೂಡಬಹುದು. ಇದನ್ನು ತಪ್ಪಿಸಲು, ಸರಿಯಾದ ಆಹಾರ ಕ್ರಮ ಅನುಸರಿಸಿ, ಯೋಗ-ಧ್ಯಾನವನ್ನು ರೂಢಿಸಿಕೊಳ್ಳಿ.

ವಿಟಮಿನ್ಸ್

ಕೆಲವು ವಿಟಮಿನ್ಸ್ ಕೊರತೆಯಿಂದಲೂ ಡಾರ್ಕ್ ಸರ್ಕಲ್ ಮೂಡಬಹುದು. ಇದನ್ನು ತಪ್ಪಿಸಲು ದೇಹಕ್ಕೆ ಅಗತ್ಯ ವಿಟಮಿನ್ ಯುಕ್ತ ಆಹಾರಗಳನ್ನು ಸೇವಿಸಿ.

ಹಸಿ ತರಕಾರಿ

ದೇಹದಲ್ಲಿ ವಿಟಮಿನ್ ಕೊರತೆಯನ್ನು ನೀಗಿಸಲು ಹಸಿ ತರಕಾರಿಗಳನ್ನು ಸೇವಿಸಿ.

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story