ರಂಜಕ, ಕಬ್ಬಿಣ ಮತ್ತು ಜೀವಸತ್ವಗಳು ಇತ್ಯಾದಿಗಳಿಂದ ಸಮೃದ್ಧವಾಗಿರುವ ಚಕೊತಾ ಸೊಪ್ಪಿನ ಸೇವನೆಯು ಚಳಿಗಾಲದಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಕೆಲವರು ಅದನ್ನು ಸೇವಿಸಬಾರದು.
ಚಕೊತಾ ಸೋಪ್ಪಿನಲ್ಲಿರುವ ಪೋಷಕ ತತ್ವಗಳ ಕಾರಣ ಜನರು ಇದನ್ನು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನುತ್ತಾರೆ.
ಕೆಲವರಿಗೆ ಚರ್ಮದ ಅಲರ್ಜಿಯ ಸಮಸ್ಯೆಯಾಗುತ್ತದೆ. ಹೀಗಾದಾಗ ಚಕೊತಾ ಸೊಪ್ಪಿನ ಸೇವನೆಯನ್ನು ನಿಲ್ಲಿಸಬೇಕು.
ಚಕೊತಾದಲ್ಲಿ ಆಕ್ಸೋಲಿಕ್ ಆಸಿಡ್ ಇರುತ್ತದೆ. ಹೀಗಾಗಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತದೆ.
ಗರ್ಭಿಣಿಯರು ಚಕೊತಾ ಸೊಪ್ಪನ್ನು ಹೆಚ್ಚು ಸೇವಿಸಬಾರದು ಗರ್ಭಪಾತವಾಗುವ ಭಯವಿರುತ್ತದೆ.
ಇದರ ಅತಿಯಾದ ಸೇವನೆಯಿಂದ ಫರ್ಟಿಲಿಟಿ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಚಕೊತಾವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದಲ್ಲಿ ಕ್ಯಾಲ್ಷಿಯಂ ಕೊರತೆ ಉಂಟಾಗುತ್ತದೆ. ಇದು ಅನೇಕ ರೀತಿಯ ಹಾನಿಯನ್ನು ಉಂಟು ಮಾಡುತ್ತದೆ.
ಇದಲ್ಲದೆ ಯಾವುದೇ ಸಮಸ್ಯೆಯಿದ್ದರೆ ವೈದ್ಯರನ್ನು ಸಂಪರ್ಕಿಸಿದ ನಂತರವೇ ಚಕೊತಾ ಸೊಪ್ಪನ್ನು ಸೇವಿಸುವುದು ಒಳ್ಳೆಯದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.