ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ಗುನ್ಯಾದಂತಹ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ.ಪ್ರತಿ ವರ್ಷ ಈ ಸೊಳ್ಳೆಗಳು ಹರಡುವ ರೋಗಗಳಿಂದ ಅನೇಕ ಜನರು ಸಾಯುತ್ತಾರೆ.
ಸಂಜೆಯ ವೇಳೆಗೆ ಈ ಸೊಳ್ಳೆಗಳು ಮನೆಯ ಬಾಗಿಲು,ಕಿಟಕಿಗಳ ಮೂಲಕ ಮನೆಯೊಳಗೆ ಬರುತ್ತವೆ.ಒಮ್ಮೆ ಮನೆಯೊಳಗೇ ಬಂದ ಸೊಳ್ಳೆಗಳು ನಂತರ ವಿಪರೀತ ಕಾಟ ಕೊಡಲು ಆರಂಭಿಸುತ್ತವೆ.
ಸೊಳ್ಳೆಗಳನ್ನು ದೂರವಿಡಲು ಮನೆಯ ಸುತ್ತ ಈ ಗಿಡಗಳನ್ನು ನೆಡಬಹುದು. ಈ ಗಿಡಗಳು ಇದ್ದಲ್ಲಿ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ.
ಪುದೀನಾ ಗಿಡ ನಿಮ್ಮ ಮನೆಯಿಂದ ಸೊಳ್ಳೆಗಳನ್ನು ದೂರವಿಡುತ್ತದೆ. ಒಂದು ಅಧ್ಯಯನದ ಪ್ರಕಾರ, ಪುದೀನಾದಲ್ಲಿ ಕಂಡುಬರುವ ನೈಸರ್ಗಿಕ ತೈಲವು ಸೊಳ್ಳೆಗಳ ವಿರುದ್ಧ ಔಷಧದಂತೆ ಕೆಲಸ ಮಾಡುತ್ತದೆ.ಆದ್ದರಿಂದಲೇ ಸೊಳ್ಳೆಗಳು ಪುದೀನಾ ಗಿಡವಿದ್ದರೆ ಹತ್ತಿರವೂ ಬರುವುದಿಲ್ಲ.
ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ರೋಸ್ಮರಿಯನ್ನು ಸಹ ನೆಡಬಹುದು. ರೋಸ್ಮರಿ ಗಿಡ ಮತ್ತು ಅದರ ಹೂವುಗಳು ಹೊರ ಸೂಸುವ ವಾಸನೆಯಿಂದಾಗಿ ಸೊಳ್ಳೆಗಳು ಇದು ಇದ್ದಲ್ಲಿ ಬರುವುದೇ ಇಲ್ಲ.
ಈ ಸುಂದರವಾದ ಸಸ್ಯವನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.ಲ್ಯಾವೆಂಡರ್ ಹೂವುಗಳಿಂದ ಹೊರ ಬರುವ ವಾಸನೆಯು ಮನೆಯಿಂದ ಸೊಳ್ಳೆಗಳನ್ನು ದೂರವಿರಿಸುವ ಕೆಲಸ ಮಾಡುತ್ತದೆ.
ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಲು, ಲೆಮನ್ ಗ್ರಾಸ್ ಅನ್ನು ಕೂಡ ನೆಡಬಹುದು. ಸೊಳ್ಳೆಗಳಿಗೆ ಈ ಗಿಡದ ವಾಸನೆ ಇಷ್ಟವಾಗುವುದಿಲ್ಲ. ಹಾಗಾಗಿಯೇ ಲೆಮೊನ್ಗ್ರಾಸ್ ಗಿಡ ಇರುವ ಕಡೆ ಸೊಳ್ಳೆಗಳು ಬರುವುದಿಲ್ಲ
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.