ಮನೆ ಮುಂದೆ ಈ ಗಿಡ ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ !

Ranjitha R K
Jul 09,2024

ಸೊಳ್ಳೆ ಕಾಟ

ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ರೋಗಗಳು ಸೊಳ್ಳೆಗಳಿಂದ ಹರಡುತ್ತವೆ.ಪ್ರತಿ ವರ್ಷ ಈ ಸೊಳ್ಳೆಗಳು ಹರಡುವ ರೋಗಗಳಿಂದ ಅನೇಕ ಜನರು ಸಾಯುತ್ತಾರೆ.

ಮನೆಯೊಳಗೆ ನುಗ್ಗುವ ಸೊಳ್ಳೆ

ಸಂಜೆಯ ವೇಳೆಗೆ ಈ ಸೊಳ್ಳೆಗಳು ಮನೆಯ ಬಾಗಿಲು,ಕಿಟಕಿಗಳ ಮೂಲಕ ಮನೆಯೊಳಗೆ ಬರುತ್ತವೆ.ಒಮ್ಮೆ ಮನೆಯೊಳಗೇ ಬಂದ ಸೊಳ್ಳೆಗಳು ನಂತರ ವಿಪರೀತ ಕಾಟ ಕೊಡಲು ಆರಂಭಿಸುತ್ತವೆ.

ಈ ಗಿಡಗಳನ್ನು ನೆಡಿ :

ಸೊಳ್ಳೆಗಳನ್ನು ದೂರವಿಡಲು ಮನೆಯ ಸುತ್ತ ಈ ಗಿಡಗಳನ್ನು ನೆಡಬಹುದು. ಈ ಗಿಡಗಳು ಇದ್ದಲ್ಲಿ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ.

ಪುದಿನಾ :

ಪುದೀನಾ ಗಿಡ ನಿಮ್ಮ ಮನೆಯಿಂದ ಸೊಳ್ಳೆಗಳನ್ನು ದೂರವಿಡುತ್ತದೆ. ಒಂದು ಅಧ್ಯಯನದ ಪ್ರಕಾರ, ಪುದೀನಾದಲ್ಲಿ ಕಂಡುಬರುವ ನೈಸರ್ಗಿಕ ತೈಲವು ಸೊಳ್ಳೆಗಳ ವಿರುದ್ಧ ಔಷಧದಂತೆ ಕೆಲಸ ಮಾಡುತ್ತದೆ.ಆದ್ದರಿಂದಲೇ ಸೊಳ್ಳೆಗಳು ಪುದೀನಾ ಗಿಡವಿದ್ದರೆ ಹತ್ತಿರವೂ ಬರುವುದಿಲ್ಲ.

ರೋಸ್ಮರಿ :

ಸೊಳ್ಳೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ರೋಸ್ಮರಿಯನ್ನು ಸಹ ನೆಡಬಹುದು. ರೋಸ್ಮರಿ ಗಿಡ ಮತ್ತು ಅದರ ಹೂವುಗಳು ಹೊರ ಸೂಸುವ ವಾಸನೆಯಿಂದಾಗಿ ಸೊಳ್ಳೆಗಳು ಇದು ಇದ್ದಲ್ಲಿ ಬರುವುದೇ ಇಲ್ಲ.

ಲ್ಯಾವೆಂಡರ್ :

ಈ ಸುಂದರವಾದ ಸಸ್ಯವನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.ಲ್ಯಾವೆಂಡರ್ ಹೂವುಗಳಿಂದ ಹೊರ ಬರುವ ವಾಸನೆಯು ಮನೆಯಿಂದ ಸೊಳ್ಳೆಗಳನ್ನು ದೂರವಿರಿಸುವ ಕೆಲಸ ಮಾಡುತ್ತದೆ.

ಲೆಮನ್ ಗ್ರಾಸ್ :

ಸೊಳ್ಳೆಗಳು ಮನೆಯೊಳಗೆ ಬರದಂತೆ ತಡೆಯಲು, ಲೆಮನ್ ಗ್ರಾಸ್ ಅನ್ನು ಕೂಡ ನೆಡಬಹುದು. ಸೊಳ್ಳೆಗಳಿಗೆ ಈ ಗಿಡದ ವಾಸನೆ ಇಷ್ಟವಾಗುವುದಿಲ್ಲ. ಹಾಗಾಗಿಯೇ ಲೆಮೊನ್ಗ್ರಾಸ್ ಗಿಡ ಇರುವ ಕಡೆ ಸೊಳ್ಳೆಗಳು ಬರುವುದಿಲ್ಲ


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story