ಕಾಫಿ ಮನಸ್ಸಿಗೆ ಅತ್ಯುತ್ತಮ ರಿಫ್ರೆಶರ್ ಆಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಕಾಫಿ ಕುಡಿಯುವುದರಿಂದ ತೂಕವನ್ನೂ ಕಡಿಮೆ ಮಾಡಬಹುದು.
ತೂಕ ಇಳಿಕೆಗೆ ಬ್ಲಾಕ್ ಕಾಫಿ ಸಹಕಾರಿ. ಆದರೆ, ಬ್ಲಾಕ್ ಕಾಫಿಗಿಂತಲೂ ಸಕ್ಕರೆ ಬದಲಿಗೆ ಒಂದು ವಿಶೇಷ ಪುಡಿ ಬೆರೆಸಿ ಕುಡಿಯುವುದರಿಂದ ಸುಲಭವಾಗಿ ಹೊಟ್ಟೆ ಕರಗುತ್ತದೆ.
ಅಧ್ಯಯನಗಳ ಪ್ರಕಾರ, ಒಂದು ಲೋಟದಷ್ಟು ಬ್ಲಾಕ್ ಕಾಫಿ ಸುಮಾರು 15%ಗಿಂತಲೂ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ.
ಬ್ಲಾಕ್ ಕಾಫಿಯಲ್ಲಿ ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯುವುದರಿಂದ ಇದು ಹಲವು ರೀತಿಯಲ್ಲಿ ತೂಕ ಇಳಿಕೆಗೆ ಪ್ರಯೋಜನಕಾರಿ ಆಗಿದೆ.
ಕಾಫಿಯಲ್ಲಿ ದಾಲ್ಚಿನ್ನಿ ಪುಡಿ ಬೆರೆಸುವುದರಿಂದ ಇದು ಸುವಾಸನೆ ನೀಡುವುದರೊಂದಿಗೆ ಸಕ್ಕರೆ ಸೇವನೆಯನ್ನು ಕೂಡ ನಿಯಂತ್ರಿಸುತ್ತದೆ.
ಬ್ಲಾಕ್ ಕಾಫಿಯಲ್ಲಿ ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯುವುದರಿಂದ ಇದು ಜೀರ್ಣಕ್ರಿಯೆ ಸುಧಾರಿಸಿ ದೇಹದ ಹೆಚ್ಚುವರಿ ಕೊಬ್ಬು ಕರಗಲು ಕೂಡ ಸಹಕಾರಿ ಆಗುತ್ತದೆ.
ಬ್ಲಾಕ್ ಕಾಫಿಯಲ್ಲಿ ದಾಲ್ಚಿನ್ನಿ ಬೆರೆಸಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಬೊಜ್ಜನ್ನು ಕೂಡ ನಿಯಂತ್ರಿಸಬಹುದು.
ಬ್ಲಾಕ್ ಕಾಫಿಯಲ್ಲಿ ಸಕ್ಕರೆ ಬದಲಿಗೆ ದಾಲ್ಚಿನ್ನಿ ಪುಡಿ ಬೆರೆಸಿ ಕುಡಿಯುವುದರಿಂದ ಉತ್ತಮ ನಿದ್ರೆಗೆ ಸಹಕಾರಿ. ಇದರಿಂದಲೂ ತೂಕ ನಿಯಂತ್ರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.