ಅಡುಗೆ ಮನೆಯ ಕಿಟಕಿ ಎಣ್ಣೆ ಪದಾರ್ಥಗಳಿಂದ ಜಿಡ್ಡು ಹಿಡಿದಾಗ ಅದನ್ನು ಸ್ವಚ್ಚಗೊಳಿಸುವುದು ಬಹಳ ಕಷ್ಟವಾಗುತ್ತದೆ.
ಬಹಳಷ್ಟು ಸಲ ಎಣ್ಣೆ ಮತ್ತು ಮಸಾಲೆ ಕಾರಣದಿಂದ ಕಿಟಕಿ ಗಲೀಜಾಗುತ್ತದೆ. ಇದನ್ನು ಶುಚಿಗೊಳಿಸುವ ಸುಲಭ ವಿಧಾನ ನಾವು ಹೇಳಲಿದ್ದೇವೆ.
ಇದನ್ನು ಶುಚಿಗೊಳಿಸಲು ಸರಳ ಮತ್ತು ಸುಲಭ ವಿಧಾನವನ್ನು ಅನುಸರಿಸಬಹುದು.
ಉಪ್ಪು ಮತ್ತು ನಿಂಬೆರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.ಈ ಪೇಸ್ಟ್ ಅನ್ನು ಅಡುಗೆ ಮನೆ ಕಿಟಕಿಗೆ ಹಚ್ಚಿ. ಇದು ಕಿಟಕಿಯ ಮೇಲಿನ ಜಿಡ್ಡನ್ನು ಸುಲಭವಾಗಿ ತೆಗೆದು ಹಾಕುತ್ತದೆ.
ರಬ್ಬಿಂಗ್ ಅಲ್ಕೋಹಾಲನ್ನು ಕೂಡಾ ಬಳಸಿ ಕಿಟಕಿ ಮೇಲಿನ ಜಿಡ್ಡನ್ನು ತೆಗೆದು ಹಾಕಬಹುದು.
ಸಾಬೂನಿನ ನೀರು ಮತ್ತು ಸಿರ್ಕಾವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಅದನ್ನು ಕಿಟಕಿ ಮೇಲೆ ಹಾಕಿದರೆ ಕಿಟಕಿ ಫಳ ಫಳನೆ ಹೊಳೆಯುತ್ತದೆ.
ಎರಡು ಚಮಚ ಬೇಕಿಂಗ್ ಸೋಡಗೆ ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ ಸ್ಪ್ರೇ ರೆಡಿ ಮಾಡಿಕೊಳ್ಳಿ. ಇದನ್ನು ಕಿಟಕಿ ಮೇಲೆ ಹಚ್ಚಿ ನಿಧಾನವಾಗಿ ತಿಕ್ಕಿದರೆ ಎಲ್ಲವೂ ಶುಚಿಯಾಗುತ್ತದೆ.
ಕಿಟಕಿ ಮೇಲೆ ಬೇಕಿಂಗ್ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಹಾಕಿ ಬ್ರಷ್ ಮೂಲಕ ಶುಚಿಗೊಳಿಸಬಹುದು.
ಕಿಟಕಿಯನ್ನು ಶುಚಿಗೊಳಿಸುವಾಗ ಕೈಗೆ ಗೌಸ್ ಹಾಕುವುದನ್ನು ಮರೆಯಬೇಡಿ.
ಸೂಚನೆ :ಮೇಲಿನ ಲೇಖನ ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.