ಶೂ ಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

Ranjitha R K
Oct 18,2024

ಶೂ ವಾಸನೆ

ಕಾಲಿನಿಂದ ಹೊರ ಬರುವ ಬೆವರಿನಿಂದ ಬ್ಯಾಕ್ಟಿರಿಯಾ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಶೂ ಒಳಗಿನಿಂದ ಕೆಟ್ಟ ವಾಸನೆ ಬರುತ್ತದೆ.

ಸರಳ ಉಪಾಯ

ನಿಮ್ಮ ಶೂ ವಿಂದ ಕೂಡಾ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಕೆಲವು ಸರಳ ಉಪಾಯ ಮಾಡಿಕೊಳ್ಳಬೇಕು.

ಕರ್ಪೂರ

ರಾತ್ರಿ ಕರ್ಪೂರದ ತುಂಡನ್ನು ಶೂ ಒಳಗೆ ಹಾಕಿ ಶೂವನ್ನು ಚೆನ್ನಾಗಿ ಪ್ಯಾಕ್ ಮಾಡಿಕೊಳ್ಳಿ. ಹೀಗೆ ಮಾಡಿದರೆ ಶೂ ಒಳಗಿರುವ ಬ್ಯಾಕ್ಟೀರಿಯಾ ನಾಶವಾಗುವುದು.

ಬಿರಿಯಾನಿ ಎಲೆ

ಬಿರಿಯಾನಿ ಎಲೆಯನ್ನು ಆಹಾರದ ರುಚಿ ಘಮ ಹೆಚ್ಚಿಸಲು ಬಳಸಲಾಗುತ್ತದೆ. ಇದನ್ನು ಶೂ ಒಳಗೆ ಇಟ್ಟರೆ ಪ್ರಯೋಜನವಾಗುವುದು.

ನ್ಯಾಪ್ತಲಿನ್ ಬಾಲ್

ಇನ್ನು ಶೂ ಒಳಗೆ ನ್ಯಾಪ್ತಲಿನ್ ಬಾಲ್ ಗಳನ್ನೂ ಇಡಬಹುದು. ಈ ಬಾಲ್ ಗಳನ್ನೂ ಶೂ ಒಳಗೆ ಇಟ್ಟು ಸರಿಯಾಗಿ ಮುಚ್ಚಿಡಿ. ಇದರಿಂದ ವಾಸನೆ ಕಡಿಮೆಯಾಗುತ್ತದೆ.

ಕರ್ಪೂರ ಮತ್ತು ಬಿರಿಯಾನಿ ಎಲೆ

ಶೂವಿನಲ್ಲಿರುವ ಬ್ಯಾಕ್ಟಿರಿಯಾ ಕಾರಣದಿಂದ ಕಾಲಿಗೆ ಸೋಂಕು ತಗಲುತ್ತದೆ. ಇದರ ನಿವಾರಣೆಗೆ ಶೂ ಒಳಗೆ ಕರ್ಪೂರ ಮತ್ತು ಬಿರಿಯಾನಿ ಎಲೆ ಇಡಬಹುದು.

ನ್ಯಾಪ್ತಲಿನ್ ಬಾಲ್

ನ್ಯಾಪ್ತಲಿನ್ ಬಾಲ್ ಗಳನ್ನು ಕಪಾಟಿನಲ್ಲಿಯೂ ಇಡಬಹುದು.ಇದರಿಂದ ಕಪಾಟಿನಿಂದ ಬರುವ ವಾಸನೆ ದೂರವಾಗುತ್ತದೆ.

ಕರ್ಪೂರ ಮತ್ತು ಬಿರಿಯಾನಿ ಎಲೆ

ಇಷ್ಟು ಮಾತ್ರವಲ್ಲದೆ ಮನೆಯೊಳಗೆ ಸುಗಂಧ ಹರಡಬೇಕಾದರೂ ಕರ್ಪೂರ ಮತ್ತು ಬಿರಿಯಾನಿ ಎಲೆಯನ್ನು ಸುಡಬಹುದು.


ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story