ಚಾಣಕ್ಯರು ಜೀವನದ ಕುರಿತು ಹಾಗೂ ಜೀವನದ ಹಲವು ಪ್ರಮುಕ ವಿಷಯಗಳು ಕುರಿತು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಕಿಸಿದ್ದಾರೆ.
ಚಾಣಕ್ಯರು ಹೇಳುವ ಪ್ರಕಾರ ಬದಲಾವಣೆಯು ಜೀವನದ ಭಾಗವಾಗಿದೆ, ಅದರಿಂದ ಬದಲಾವಣೆಗೆ ಎಂದಿಗೂ ಭಯಪಡಬಾರದು.
ಬದಲಾವಣೆಗೆ ಭಯಪಡುವ ವ್ಯಕ್ತಿಯೂ ಎಂದಿಗೂ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ.
ಚಾಣಕ್ಯರು ಉಲ್ಲೇಕಿಸಿರುವ ಪ್ರಕಾರ ಬದಲಾವಣೆಯೂ ಜೀವನದಲ್ಲಿ ಹೊಸ ಅವಕಾಶಗಳನ್ನು ಹಾಗೂ ಅನುಭವಗಳನ್ನು ತಂದುಕೊಡುತ್ತದೆ.
ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ಮುನುಷ್ಯ ತನ್ನ ಜೀವನದಲ್ಲಿ ಹೋರಾಡುವುದಕ್ಕೆ ಎಂದಿಗೂ ಭಯ ಪಡಬಾರದು.
ಹೊರಾಡಲು ಸಿದ್ದವಿರುವ ವ್ಯಕ್ತಿ ಎಂದಿಗೂ ಬಲಶಾಲಿಯಾಗಿರುತ್ತಾನೆ ಎಂದು ಚಾಣಕ್ಯರ ನೀತಿಯಲ್ಲಿ ಉಲ್ಲೇಕಿಸಲಾಗಿದೆ.
ಸಂಘರ್ಷಕ್ಕೆ ಹೆದರುವ ವ್ಯಕ್ತಿ ಎಂದಿಗೂ ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.