ಸಾಮಾನ್ಯವಾಗಿ ತಂಪು ಪಾನೀಯಗಳನ್ನು ಕುಡಿಯಲು ಖರೀದಿಸಲಾಗುತ್ತದೆ. ಆದರೆ ಅದರಿಂದ ಹೊರಬರುವ ಅನಿಲದಿಂದ ಮನೆಯಲ್ಲಿರುವ ಅನೇಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು. ತಂಪು ಪಾನೀಯಗಳಿಂದ ಯಾವ ವಸ್ತುಗಳನ್ನು ಸ್ವಚ್ಛಗೊಳಿಸಬಹುದು ನೋಡೋಣ.
ಕೋಲ್ಡ್ ಡ್ರಿಂಕ್ ಸಹಾಯದಿಂದ ತುಕ್ಕು ಹಿಡಿದ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ ಅಲ್ಯುಮಿನಿಯಮ್ ಫಾಯಿಲ್ ಬೇಕಾಗುತ್ತದೆ.
ಅಲ್ಯುಮಿನಿಯಮ್ ಫಾಯಿಲ್ ಅನ್ನು ಚೆಂಡಿನಂತೆ ಮಾಡಿ ಅದನ್ನು ಕೋಲ್ಡ್ ಡ್ರಿಂಕ್ ನಲ್ಲಿ ಅಡ್ಡಿ ತುಕ್ಕು ಹಿಡಿದ ಸ್ಥಳಗಳಲ್ಲಿ ಉಜ್ಜಬೇಕು.
ಅಡುಗೆ ಮಾಡುವಾಗ ತಳ ಹಿಡಿದ ಪಾತೆಗಳನ್ನು ಕೋಲ್ಡ್ ಡ್ರಿಂಕ್ ಸಹಾಯದಿಂದ ಸುಲಭವಾಗಿ ಸ್ವಚ್ಚಗೊಳಿಸಬಹುದು.
ಇದಕ್ಕಾಗಿ ತಳ ಹಿಡಿದ ಪಾತ್ರೆಗೆ ಕೋಲ್ಡ್ ಡ್ರಿಂಕ್ ಅನ್ನು ಹಾಕಬೇಕು. ಸ್ವಲ್ಪ ಸಮಯದ ನಂತರ ಸ್ಕ್ರಬ್ ಬಳಸಿ ಪಾತ್ರೆಯನ್ನು ತೊಳೆಯಬೇಕು.
ಕೋಲ್ಡ್ ಡ್ರಿಂಕ್ ಸಹಾಯದಿಂದ ಸ್ನಾನದ ಮನೆಯ ಮೊಂಡು ಕಲೆಗಳನ್ನು ಕೂಡಾ ತೆಗೆಯಬಹುದು.
ಬಾತ್ ರೂಂ ಟೈಲ್ಸ್ ಸ್ವಚ್ಚಗೊಳಿಸಲು ತಂಪು ಪಾನೀಯ ಬಳಸಬಹುದು.
ಅಷ್ಟು ಮಾತ್ರವಲ್ಲ ಬಟ್ಟೆಯ ಮೇಲಿರುವ ಕಲೆಗಳನ್ನು ಕೂಡಾ ಕೋಲ್ಡ್ ಡ್ರಿಂಕ್ ಬಳಸಿ ಸುಲಭವಾಗಿ ಹೋಗಲಾಡಿಸಬಹುದು.
ಈ ಎಲ್ಲಾ ವಸ್ತುಗಳನ್ನು ಸ್ವಚ್ಚಗೊಳಿಸಲು ತಂಪು ಪಾನೀಯವನ್ನು ಬಳಸಬಹುದು.