ಚಿಟಿಕೆಯಲ್ಲಿ ತ್ವಚೆ ಹೊಳೆಯುವಂತೆ ಮಾಡಲು ಗಂಧದ ಫೇಸ್ ಪ್ಯಾಕ್ ಬಳಸಿ

ಗಂಧ

ಸಾಮಾನ್ಯವಾಗಿ ಶ್ರೀಗಂಧವನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಆದರಿಡು ತ್ವಚೆಯ ಆರೈಕೆಯಲ್ಲೂ ತುಂಬಾ ಸಹಾಯಕ.

ಗಂಧದ ಫೇಸ್ ಪ್ಯಾಕ್

ಶ್ರೀಗಂಧದ ಪುಡಿಯೊಂದಿಗೆ ಕೆಲವು ಪದಾರ್ಥಗಳನ್ನು ಬೇರೆ ಫೇಸ್ ಪ್ಯಾಕ್ ತಯಾರಿಸಿ ಬಳಸುವುದರಿಂದ ತ್ವರಿತವಾಗಿ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು.

ಮುಲ್ತಾನಿ ಮಿಟ್ಟಿ ಅರಿಶಿನ

ಶ್ರೀಗಂಧ/ಚಂದನದ ಪುಡಿಯೊಂದಿಗೆ ಸ್ವಲ್ಪ ಮುಲ್ತಾನಿ ಮಿಟ್ಟಿ, ಅರಿಶಿನವನ್ನು ಹಾಕಿ ಹಸಿ ಹಾಲಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ನಿವಾರಣೆಯಾಗಿ ಮುಖದಲ್ಲಿ ಮೂಡಿರುವ ಕಲೆಗಳು ಮಾಯವಾಗುತ್ತವೆ.

ಹಾಲಿನೊಂದಿಗೆ ಶ್ರೀಗಂಧ

ಶ್ರೀಗಂಧದ ಪುಡಿಯನ್ನು ಹಸಿ ಹಾಲಿನಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕಲೆರಹಿತ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು.

ರೋಸ್ ವಾಟರ್

ಶ್ರೀಗಂಧದ ಪುಡಿಯಲ್ಲಿ ರೋಸ್ ವಾಟರ್ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಲೇಪಿಸುವುದರಿಂದ ತ್ವಚೆಯ ರಂಧ್ರಗಳಲ್ಲಿರುವ ಕೊಳಕು ನಿವಾರಣೆಯಾಗಿ ಕಾಂತಿ ಹೊರಹೊಮ್ಮುತ್ತದೆ.

ಹಾಲಿನ ಕೆನೆ

ಶ್ರೀಗಂಧದ ಪುಡಿಯನ್ನು ಹಾಲಿನ ಕೆನೆಯೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿ ಸ್ವಲ್ಪ ಒಣಗಿದ ಬಳಿಕ ಲಘುವಾಗಿ ಮಸಾಜ್ ಮಾಡುತ್ತಾ ಫೇಸ್ ಪ್ಯಾಕ್ ರಿಮೂವ್ ಮಾಡಿ. ಇದರಿಂದ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story