ಸಾಮಾನ್ಯವಾಗಿ ಶ್ರೀಗಂಧವನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಆದರಿಡು ತ್ವಚೆಯ ಆರೈಕೆಯಲ್ಲೂ ತುಂಬಾ ಸಹಾಯಕ.
ಶ್ರೀಗಂಧದ ಪುಡಿಯೊಂದಿಗೆ ಕೆಲವು ಪದಾರ್ಥಗಳನ್ನು ಬೇರೆ ಫೇಸ್ ಪ್ಯಾಕ್ ತಯಾರಿಸಿ ಬಳಸುವುದರಿಂದ ತ್ವರಿತವಾಗಿ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು.
ಶ್ರೀಗಂಧ/ಚಂದನದ ಪುಡಿಯೊಂದಿಗೆ ಸ್ವಲ್ಪ ಮುಲ್ತಾನಿ ಮಿಟ್ಟಿ, ಅರಿಶಿನವನ್ನು ಹಾಕಿ ಹಸಿ ಹಾಲಿನಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ನಿವಾರಣೆಯಾಗಿ ಮುಖದಲ್ಲಿ ಮೂಡಿರುವ ಕಲೆಗಳು ಮಾಯವಾಗುತ್ತವೆ.
ಶ್ರೀಗಂಧದ ಪುಡಿಯನ್ನು ಹಸಿ ಹಾಲಿನಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕಲೆರಹಿತ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು.
ಶ್ರೀಗಂಧದ ಪುಡಿಯಲ್ಲಿ ರೋಸ್ ವಾಟರ್ ಮಿಕ್ಸ್ ಮಾಡಿ ಇದನ್ನು ಮುಖಕ್ಕೆ ಲೇಪಿಸುವುದರಿಂದ ತ್ವಚೆಯ ರಂಧ್ರಗಳಲ್ಲಿರುವ ಕೊಳಕು ನಿವಾರಣೆಯಾಗಿ ಕಾಂತಿ ಹೊರಹೊಮ್ಮುತ್ತದೆ.
ಶ್ರೀಗಂಧದ ಪುಡಿಯನ್ನು ಹಾಲಿನ ಕೆನೆಯೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸಿ ಸ್ವಲ್ಪ ಒಣಗಿದ ಬಳಿಕ ಲಘುವಾಗಿ ಮಸಾಜ್ ಮಾಡುತ್ತಾ ಫೇಸ್ ಪ್ಯಾಕ್ ರಿಮೂವ್ ಮಾಡಿ. ಇದರಿಂದ ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.