ಅನೇಕ ಜನರು ಖರೀದಿಸಿದ ತಕ್ಷಣ ಹೊಸ ಉಡುಪುಗಳನ್ನು ಧರಿಸುತ್ತಾರೆ, ಆದರೆ ಇದು ದೇಹಕ್ಕೆ ಭಾರೀ ಅಪಾಯವನ್ನು ತಂದೊಡ್ಡುತ್ತದೆ. ಹೊಸ ಡ್ರೆಸ್ಗಳಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯೂ ಇದೆ.
ಹೊಸ ಬಟ್ಟೆಗಳನ್ನು ಖರೀದಿಸಿದ ನಂತರ, ಅವುಗಳನ್ನು ಧರಿಸುವ ಮೊದಲು ತೊಳೆಯಬೇಕು. ಹೊಸ ಬಟ್ಟೆಗಳನ್ನು ಒಗೆಯದೆ ಧರಿಸುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.
ಹೊಸ ಬಟ್ಟೆ ಕೊಳ್ಳಲು ಹೋದರೆ ಒಮ್ಮೆ ಟ್ರೈ ಮಾಡಿ ನೋಡುವುದು ಸಾಮಾನ್ಯ. ಆ ಬಳಿಕ ಇಷ್ಟವಾದರೆ ಖರೀದಿಸುತ್ತಾರೆ. ಆದರೆ ಇದು ಅಪಾಯಕ್ಕೆ ದಾರಿಯನ್ನು ಮಾಡಬಹುದು.
ಟ್ರಯಲ್ ಸಮಯದಲ್ಲಿ ಬಟ್ಟೆಯ ಮೇಲೆ ಬೆವರು ಬೀಳುತ್ತದೆ. ಬ್ಯಾಕ್ಟೀರಿಯಾಗಳು ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಇರುತ್ತವೆ.
ಹೊಸ ಬಟ್ಟೆಗಳು ಅನೇಕ ರೀತಿಯ ಸೋಂಕುಗಳಿಗೆ ಕಾರಣವಾಗಬಹುದು. ಯಾಕೆಂದರೆ ಹೊಸ ಡ್ರೆಸ್’ಗಳು ಫ್ಯಾಕ್ಟರಿಯಿಂದ ತಯಾರಾಗಿ ನೇರವಾಗಿ ಔಟ್ಲೆಟ್ ತಲುಪುತ್ತವೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ, ಉಡುಪುಗಳು ಹಲವು ಬಾರಿ ಕೈಯಿಂದ ಕೈಯಿಂದ ಬದಲಾಗುತ್ತಿರುತ್ತವೆ.
ಹೊಸ ಬಟ್ಟೆಯಿಂದ ಒಂದು ರೀತಿಯ ವಾಸನೆ ಬರುತ್ತದೆ. ಅದೇನೆಂದರೆ ಬಟ್ಟೆ ಪ್ಯಾಕಿಂಗ್ ಸಮಯದಲ್ಲಿ ಕೀಟಗಳು ಬರದಂತೆ ಬಳಸುವ ಒಂದು ತರಹದ ರಾಸಾಯನಿಕ. ಆ ರಾಸಾಯನಿಕಗಳು ಕೆಲವು ರೀತಿಯ ಅಲರ್ಜಿಯನ್ನು ಉಂಟುಮಾಡಬಹುದು.
ದಿರಿಸುಗಳನ್ನು ಒಗೆಯದೆ ಧರಿಸಿದರೆ ರಾಸಾಯನಿಕ ಬಣ್ಣಗಳು ದೇಹಕ್ಕೆ ಅಂಟಿಕೊಳ್ಳುತ್ತವೆ. ಈ ಕಾರಣದಿಂದಾಗಿ, ಅಲರ್ಜಿಯ ಸಾಧ್ಯತೆಯಿದೆ.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.