1. Success Mantra: ಈ ಕೆಲಸಗಳ ಮೂಲಕ ನಿಮ್ಮ ದಿನ ಆರಂಭಿಸಿ, ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ!
2. ಯಶಸ್ವಿ ಮತ್ತು ಸಂತೋಷದ ಜೀವನದ ಪ್ರಮುಖ ಸಾರವನ್ನು ಗರುಡ ಪುರಾಣದಲ್ಲಿ ಅಡಗಿದೆ.
3. ಈ ಮಹಾಪುರಾಣದಲ್ಲಿ ಬರೆದಿರುವ ವಿಷಯಗಳನ್ನು ಅನುಸರಿಸುವವರು ಜೀವನದಲ್ಲಿ ಮಹತ್ತರವಾದ ಯಶಸ್ಸನ್ನು ಪಡೆಯುತ್ತಾರೆ.
4. ಪ್ರತಿದಿನ ಬೆಳೆಗ್ಗೆ ಬೇಗನೆ ಸ್ನಾನ ಮಾಡಿದ ನಂತರ ದೇವರನ್ನು ದೇವರನ್ನು ಪ್ರಾರ್ಥಿಸಿ ಮತ್ತು ಪೂಜಿಸಿ . ಇದರ ನಂತರ ನಿಮ್ಮ ಪೂರ್ವಜರನ್ನು ಸ್ಮರಿಸಿ ಅವರ ಆಶೀರ್ವಾದವನ್ನೂ ಪಡೆಯಿರಿ.
5. ಗರುಡ ಪುರಾಣದ ಪ್ರಕಾರ, ನೀವು ಪ್ರತಿನಿತ್ಯ ಮನೆಯಲ್ಲಿ ಯಾವುದೇ ಆಹಾರವನ್ನು ಬೇಯಿಸಿ, ಅಡುಗೆ ಮಾಡುವಾಗ ಶುದ್ಧತೆಯ ಬಗ್ಗೆ ಸಂಪೂರ್ಣ ಕಾಳಜಿವಹಿಸಿ. ಆಹಾರ ತಯಾರಿಸಿದ ನಂತರ ಮೊದಲು ದೇವರಿಗೆ ಅರ್ಪಿಸಿ.
6. ಗರುಡ ಪುರಾಣದ ಪ್ರಕಾರ, ಯಾವಾಗಲೂ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ. ಅವರಿಗೆ ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುತ್ತಿರಿ. ಇದಲ್ಲದೇ ರೋಗಿಗಳ ಸೇವೆ ಮಾಡಿ.
7. ಗರುಡ ಪುರಾಣದ ಪ್ರಕಾರ, ಪ್ರತಿದಿನ ಮೊದಲ ರೊಟ್ಟಿಯನ್ನು ಹಸುವಿಗೆ ನೀಡಬೇಕು, ಕೊನೆಯ ರೊಟ್ಟಿಯನ್ನು ನಾಯಿ ಮತ್ತು ಪಕ್ಷಿಗಳಿಗೆ ನೀಡಬೇಕು.
8. ಹೀಗೆ ಮಾಡುವುದರಿಂದ ಹಳೆಯ ಜನ್ಮದ ಕರ್ಮಗಳೂ ನಾಶವಾಗುತ್ತವೆ ಮತ್ತು ಜೀವನದಲ್ಲಿ ಎಲ್ಲ ಸುಖ ಸಿಗುತ್ತದೆ.
9. ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.