ಮಧುಮೇಹದಿಂದ ಪರಿಹಾರ ನೀಡುವ 5 ಚಮತ್ಕಾರಿ ಪಾನೀಯಗಳಿವು

ಮಧುಮೇಹ

ಭಾರತದಲ್ಲಿ ಅತಿ ಹೆಚ್ಚು ಜನರನ್ನು ತನ್ನ ಕಪಿಮುಷ್ಟಿಯಲ್ಲಿ ಸಿಲುಕಿಸಿರುವ ಕಾಯಿಲೆ ಎಂದರೆ 'ಮಧುಮೇಹ'.

ಡಯಾಬಿಟಿಸ್ ಡಯಟ್

ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆ ಇರುವವರು ತಮ್ಮ ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ.

ಮಧುಮೇಹಕ್ಕೆ ಮನೆಮದ್ದು

ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಳವು ಮೂತ್ರಪಿಂಡಗಳ ವೈಫಲ್ಯದ ಜೊತೆಗೆ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸುತ್ತದೆ. ಆದರೆ, ದೈನಂದಿನ ಜೀವನದಲ್ಲಿ ಐದು ಬಗೆಯ ಪಾನೀಯಗಳನ್ನು ಬಳಸುವುದರಿಂದ ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯಬಹುದು.

ಮೆಂತ್ಯ ನೀರು

ಮಧುಮೇಹ ರೋಗಿಗಳಿಗೆ ಮೆಂತ್ಯ ಯಾವುದೇ ವರದಾನಕ್ಕಿಂತಲೂ ಕಡಿಮೆ ಇಲ್ಲ. ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ನೀರು ಕುಡಿಯುವುದರಿಂದ ಶುಗರ್ ಹೆಚ್ಚಾಗದಂತೆ ತಡೆಯಬಹುದು.

ದಾಲ್ಚಿನ್ನಿ ನೀರು

ನಿತ್ಯ ಒಂದು ಲೋಟ ದಾಲ್ಚಿನ್ನಿ ನೀರನ್ನು ಸೇವಿಸುವುದರಿಂದ ಇದು ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿಡಲು ತುಂಬಾ ಸಹಾಯಕವಾಗಿದೆ.

ಆಮ್ಲಾ ನೀರು

ವಿಟಮಿನ್ ಸಿ ಸಮೃದ್ಧ ನೆಲ್ಲಿಕಾಯಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ, ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನಲ್ಲಿ 1 ಸ್ಪೂನ್ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯಬೇಕು.

ಗ್ರೀನ್ ಟೀ

ತೂಕ ಇಳಿಕೆಯಲ್ಲಿ ಚಮತ್ಕಾರಿ ಪಾನೀಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗ್ರೀನ್ ಟೀ ಮಧುಮೇಹವನ್ನು ನಿಯಂತ್ರಿಸಲು ಕೂಡ ಲಾಭದಾಯಕವಾಗಿದೆ.

ಚಿಯಾ ಸೀಡ್ಸ್

ಚಿಯಾ ಬೀಜಗಳನ್ನು ಸೇವಿಸುವ ಮೂಲಕ ಇಲ್ಲವೇ ಚಿಯಾ ಸೀಡ್ಸ್ ನಿಂದ ತಯಾರಿಸಿದ ಪಾನೀಯ ಕುಡಿಯುವ ಮೂಲಕ ನೀವು ಮಧುಮೇಹವನ್ನು ನಿಯಂತ್ರಿಸಬಹುದು.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story