ಶನಿದೇವರನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ.
ನಾವು ಮಾಡುವ ಕೆಲಸಕ್ಕೆ ಅನುಗುಣವಾಗ ಶನಿದೇವರು ತೀರ್ಪು ನೀಡುತ್ತಾರಂತೆ.
ಶನಿಯನ್ನು ಒಲಿಸಿಕೊಳ್ಳುವುದು ಅಥವಾ ಆಶೀರ್ವಾದ ಪಡೆದುಕೊಳ್ಳಲು ಪ್ರತಿಯೊಬ್ಬರೂ ಬಯಸುತ್ತಾರೆ.
ಶನಿವಾರ ಉಪವಾಸವಿದ್ದು ಶನಿ ದೇವಾಲಯಕ್ಕೆ ಹೋಗಿ ಎಣ್ಣೆ ಅರ್ಪಿಸಿ, ಪ್ರಾರ್ಥಿಸಬೇಕು.
ಶನಿದೇವರನ್ನು ಪ್ರಾರ್ಥಿಸುವಾಗ ಅಥವಾ ಪೂಜಿಸುವಾಗ ಮೂರ್ತಿಯ ಎದುರಿಗೆ ಶನಿಯ ದೃಷ್ಟಿ ನೇರವಾಗಿ ಬೀಳುವಂತೆ ನಿಲ್ಲಬಾರದು.
ಶನಿದೇವರನ್ನು ಪೂಜಿಸುವಾಗ ಶನಿಯ ಮಂತ್ರಗಳನ್ನು ಹೇಳಬೇಕು.
ಶನಿವಾರ ಬಡವರಿಗೆ & ಹಸಿದವರಿಗೆ ಆಹಾರ ದಾನ ಮಾಡಬೇಕು.
ಶನಿವಾರ ನಿರ್ಗತಿಕರಿಗೆ ಕಪ್ಪು ಅಥವಾ ಕಡು ನೀಲಿ ವಸ್ತ್ರ ದಾನ ಮಾಡಬೇಕು.