ಬೆಕ್ಕು ರಾತ್ರಿಯಲ್ಲಿ ಅಳುವುದು

ರಾತ್ರಿಯಲ್ಲಿ ಬೆಕ್ಕು ಅಳುವುದನ್ನು ನೀವು ಅನೇಕ ಬಾರಿ ಕೇಳಿರುತ್ತೀರಿ. ಬೆಕ್ಕು ಅಳುವುದು ಶುಭವೋ ಅಥವಾ ಅಶುಭವೋ ಎಂಬುದು ಅನೇಕರ ಪ್ರಶ್ನೆಯಾಗಿರುತ್ತದೆ.

ಬೆಕ್ಕು ಅಳುವುದರ ಅರ್ಥ

ರಾತ್ರಿಯಲ್ಲಿ ಬೆಕ್ಕು ಅಳುತ್ತಿದ್ದರೆ ನಮಗೆ ಸಹಜವಾಗಿ ಭಯವಾಗುತ್ತದೆ. ವಾಸ್ತವವಾಗಿ ಬೆಕ್ಕಿನ ಅಳುವಿಗೆ ಹಲವು ಅರ್ಥಗಳಿವೆ.

ಭವಿಷ್ಯದ ಘಟನೆಗಳ ಸೂಚನೆ

ಬೆಕ್ಕು ಭವಿಷ್ಯದ ಘಟನೆಗಳನ್ನು ಗ್ರಹಿಸುತ್ತದೆ ಎಂದು ಹೇಳಲಾಗುತ್ತದೆ. ಬೆಕ್ಕು ಅಳುವುದು ಈ ಘಟನೆಗಳನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ.

ನಕಾರಾತ್ಮಕ ಶಕ್ತಿಯ ಸೂಚನೆ

ಬೆಕ್ಕು ಅಳುವುದು ನಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ರೀತಿ ಅಳುವ ಮೂಲಕ ಅದು ಜಾಗರೂಕವಾಗಿರಲು ಸೂಚಿಸುತ್ತದೆ ಎಂದು ಹೇಳಲಾಗಿದೆ.

ಆರ್ಥಿಕ ಬಿಕ್ಕಟ್ಟಿನ ಸೂಚನೆ

ಬ್ರಾಹ್ಮಿ ಮುಹೂರ್ತದಲ್ಲಿ ಬೆಕ್ಕು ಅಳುತ್ತಿದ್ದರೆ ಅದು ಆರ್ಥಿಕ ನಷ್ಟದ ಸಂಕೇತವೆಂದು ನಂಬಲಾಗಿದೆ.

ವ್ಯಕ್ತಿಯ ಸಾವಿನ ಸಂಕೇತ

ಮಧ್ಯರಾತ್ರಿಯಲ್ಲಿ ಬೆಕ್ಕು ಅಳುವುದರಿಂದ ಹತ್ತಿರದ ಸಂಬಂಧಿಕರ ಸಾವನ್ನು ಸೂಚಿಸುತ್ತದೆ ಎಂದು ಕೆಲವು ನಂಬಿದ್ದಾರೆ.

ಅನಾರೋಗ್ಯದ ಎಚ್ಚರಿಕೆ

ಬೆಕ್ಕು ಅಳುವುದನ್ನು ಕೇಳುವುದು ಆರೋಗ್ಯ ಹದಗೆಡುವ ಎಚ್ಚರಿಕೆಯೂ ಆಗಿರಬಹುದು. ಇಂತಹ ಜನರ ಆರೋಗ್ಯವು ಮುಂದಿನ ದಿನಗಳಲ್ಲಿ ಹದಗೆಡಬಹುದು.

ಅನಾರೋಗ್ಯ ಅಥವಾ ದುಃಖ

ಪ್ರಾಣಿ ತಜ್ಞರ ಪ್ರಕಾರ, ಬೆಕ್ಕು ಅನಾರೋಗ್ಯ ಅಥವಾ ನೋವಿನಿಂದ ಬಳಲುತ್ತಿದ್ದಾಗ ರಾತ್ರಿ ವೇಳೆ ಅಳುವ ಮೂಲಕ ತನ್ನ ದುಃಖವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಲಾಗಿದೆ.

ಹಸಿವಾದಾಗ ಅಳುವುದು

ಬೆಕ್ಕು ಹಸಿವಾದಾಗಲೂ ರಾತ್ರಿಯಲ್ಲಿ ಅಳುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಬೆಕ್ಕು ತನ್ನ ದುಃಖವನ್ನು ವ್ಯಕ್ತಪಡಿಸುತ್ತದಂತೆ.

ಗರ್ಭಧಾರಣೆಯ ಒತ್ತಡ

ಪ್ರಾಣಿ ತಜ್ಞರ ಪ್ರಕಾರ, ಕೆಲವೊಮ್ಮೆ ಬೆಕ್ಕುಗಳು ಗರ್ಭಾವಸ್ಥೆಯ ಒತ್ತಡದಿಂದ ಅಳಲು ಪ್ರಾರಂಭಿಸುತ್ತವಂತೆ.

VIEW ALL

Read Next Story