ರೈಲು ಪ್ರಯಾಣದಲ್ಲೂ ಕ್ಯಾಶ್ ಲಿಮಿಟ್, ಈ ಬಗ್ಗೆ ಇರಲಿ ಮಾಹಿತಿ

ವಿಮಾನ

ವಿಮಾನದಲ್ಲಿ ಹೋಗುವಾಗ ಹೆಚ್ಚು ನಗದು ಕೊಂಡೊಯ್ಯುವಂತಿಲ್ಲ ಎಂದು ನಿಮಗೆ ತಿಳಿದಿರಬಹುದು.

ರೈಲಿನಲ್ಲೂ ಕ್ಯಾಶ್ ಲಿಮಿಟ್

ವಿಮಾನವಷ್ಟೇ ಅಲ್ಲ ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುವಾಗಲೂ ಹೆಚ್ಚು ಹಣ ಕೊಂಡೊಯ್ಯಬಾರದು ಎಂದು ನಿಮಗೆ ತಿಳಿದಿದೆಯೇ?

ನಗದು ಸಾಗಿಸಲು ನಿರ್ಬಂಧ

ಭಾರತೀಯ ರೈಲ್ವೆಯಲ್ಲಿ ಇಂತಿಷ್ಟೇ ನಗದನ್ನು ಸಾಗಿಸಬೇಕು ಎಂಬ ಬಗ್ಗೆ ಯಾವುದೇ ನಿರ್ಬಂಧವಿಲ್ಲ. ಮಿತಿಗಿಂತ ಹೆಚ್ಚು ಹಣವಿದ್ದಾಗ ಕಾನೂನು ಜಾರಿ ಸಂಸ್ಥೆಗಳು ನಿಮ್ಮನ್ನು ಪ್ರಶ್ನಿಸಬಹುದು.

ಕಾನೂನು ಬಾಹಿರ ಚಟುವಟಿಕೆ

ರೈಲಿನಲ್ಲಿ ಪ್ರಯಾಣಿಕರಿಗೆ ಕ್ಯಾಶ್ ಲಿಮಿಟ್ ಇಲ್ಲದಿದ್ದರೂ ಸಹ ಕಾನೂನುಬಾಹಿರ ಚಟುವಟಿಕೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.

ಮಾರ್ಗಸೂಚಿ

ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುವ ಭಾರತೀಯ ರೈಲ್ವೇಯಲ್ಲಿ ದೊಡ್ಡ ಮೊತ್ತದ ಹಣ ಸಾಗಿಸುವಾಗ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ.

ದೊಡ್ಡ ಮೊತ್ತದ ನಗದು

ನೀವು ಭಾರತೀಯ ರೈಲ್ವೆಯಲ್ಲಿ ಅಧಿಕ ಮೊತ್ತದ ನಗದನ್ನು ಸಾಗಿಸುವಾಗ ರೈಲ್ವೆ ಅಧಿಕಾರಿಗಳು ಅದರಲ್ಲೂ ಆರ್‌ಪಿ‌ಎಫ್ ಅಥವಾ ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸಬಹುದು.

ಸೂಕ್ತ ದಾಖಲೆ

ರೈಲಿನಲ್ಲಿ ಪ್ರಯಾಣಿಸುವ ವೇಳೆ ನೀವು ₹50,000ಕ್ಕಿಂತ ಹೆಚ್ಚು ಹಣ ಸಾಗಿಸುವಾಗ ಆದಾಯದ ಮೂಲದ ಬಗ್ಗೆ ಸೂಕ್ತ ದಾಖಲೆ ಹೊಂದಿರುವುದು ಬಹಳ ಮುಖ್ಯ.

VIEW ALL

Read Next Story