ಸಚಿನ್ ತೆಂಡೂಲ್ಕರ್‌

ನಾವು ಕ್ರಿಕೆಟ್‌ ಬಗ್ಗೆ ಮಾತನಾಡುವಾಗ ಕೆಲ ಸ್ಟಾರ್‌ ಆಟಗಾರರ ಮುಖಗಳು ಮೊದಲು ನೆನಪಿಗೆ ಬರುತ್ತವೆ. ಈ ಪೈಕಿ ಸಚಿನ್ ತೆಂಡೂಲ್ಕರ್‌ ಹೆಸರು ಅಗ್ರಸ್ಥಾನದಲ್ಲಿದೆ.

Puttaraj K Alur
Sep 03,2024

ಏಕೈಕ T20 ಪಂದ್ಯ

ತಮ್ಮ ಕ್ರಿಕೆಟ್‌ ಜೀವನದಲ್ಲಿ ಒಂದೇ ಒಂದು T20 ಪಂದ್ಯವನ್ನು ಆಡಿರುವ ದಿಗ್ಗಜ ಆಟಗಾರರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಸಚಿನ್‌ ತೆಂಡೂಲ್ಕರ್‌

ಸಚಿನ್‌ ತೆಂಡೂಲ್ಕರ್‌ 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಮತ್ತು ಕೊನೆಯ T20 ಪಂದ್ಯವನ್ನು ಆಡಿದ್ದರು.

ರಾಹುಲ್‌ ದ್ರಾವಿಡ್‌

ಕ್ರಿಕೆಟ್ ಜನಗತ್ತಿನ 'ಗೋಡೆ' ಖ್ಯಾತಿಯ ಆಟಗಾರ ರಾಹುಲ್‌ ದ್ರಾವಿಡ್‌ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದೇ ಒಂದು T20 ಪಂದ್ಯವನ್ನಾಡಿದ್ದಾರೆ. ಅವರು 2011ರಲ್ಲಿ ಇಂಗ್ಲೆಂಡ್‌ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.

ಇಂಜಮಾಮ್‌ ಉಲ್‌ ಹಕ್‌

ಪಾಕ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌ ಹಕ್‌ ಸಹ ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದೇ ಒಂದು T20 ಪಂದ್ಯವನ್ನಾಡಿದ್ದಾರೆ. ಅವರು 2006ರಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಮತ್ತು ಕೊನೆಯ T20 ಪಂದ್ಯವನ್ನು ಆಡಿದ್ದರು.

ಮಾಂಟಿ ಪನೇಸರ್‌

ಇಂಗ್ಲೆಂಡ್‌ ಆಟಗಾರ ಮಾಂಟಿ ಪನೇಸರ್‌ ಕೂಡ ಕೇವಲ ಒಂದು T20 ಪಂದ್ಯವನ್ನು ಆಡಿದ್ದಾರೆ. ಮಾಂಟಿ ಪನೇಸರ್‌ 2006ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಪಂದ್ಯವನ್ನು ಆಡಿದ್ದರು.

ಜೇಸನ್‌ ಗಿಲ್ಲೆಸ್ಪಿ

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಜೇಸನ್‌ ಗಿಲ್ಲೆಸ್ಪಿ ಕೂಡ ಸೇರಿದ್ದಾರೆ. ಅವರು 2005ರಲ್ಲಿ ಇಂಗ್ಲೆಂಡ್‌ ವಿರುದ್ಧ ತಮ್ಮ ವೃತ್ತಿಜೀವನದ ಏಕೈಕ T20 ಪಂದ್ಯವನ್ನು ಆಡಿದ್ದರು.

VIEW ALL

Read Next Story