ಜಾವೆಲಿನ್ ವಿಶ್ವ ಶ್ರೇಯಾಂಕದಲ್ಲಿ ಪ್ರಸ್ತುತ ನಂ.1 ಚೋಪ್ರಾ ಅವರು ಟೋಕಿಯೊ 2020 ರಲ್ಲಿ ಒಲಿಂಪಿಕ್ ಚಿನ್ನವನ್ನು ಗೆದ್ದಿದ್ದರು,
ಏಕಕಾಲದಲ್ಲಿ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದ ಮೂರನೆ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಪರ್ಧೆಯಲ್ಲಿರುವ ಇತರ ಇಬ್ಬರು ಭಾರತೀಯ ಜಾವೆಲಿನ್ ಎಸೆತಗಾರರೆಂದರೆ ಕಿಶೋರ್ ಜೆನಾ ಮತ್ತು ಡಿಪಿ ಮನು ಅವರು ಪೋಡಿಯಂ ಸ್ಥಾನಗಳನ್ನು ಪಡೆಯಲು ಸಾಧ್ಯವಾಗದಿದ್ದರೂ ಸಹ ಉತ್ತಮ ಪ್ರದರ್ಶನಗಳನ್ನು ನೀಡಿದರು.
ಫೈನಲ್‌ನಲ್ಲಿ ಚೋಪ್ರಾ ಅವರ ಎರಡನೇ ಪ್ರಯತ್ನದಲ್ಲಿ ಅವರು ಜಾವೆಲಿನ್ ಅನ್ನು 88.17 ಮೀಟರ್‌ಗಳ ದೂರಕ್ಕೆ ಎಸೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಬುಡಾಪೆಸ್ಟ್‌ನಲ್ಲಿ ನಡೆದ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.