ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ದಾದಾ ಎಂದು ಕರೆಯಲಾಗುತ್ತದೆ. ಇನ್ನು ನಾವಿಂದು ಈ ವರದಿಯಲ್ಲಿ ಗಂಗೂಲಿ ಬಗ್ಗೆ ಅಲ್ಲ, ಅವರ ಮಗಳು ಸನಾ ಗಂಗೂಲಿ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸೌರವ್ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಇಷ್ಟಪಡುತ್ತಾರೆ. ಅಂದಹಾಗೆ ಗಂಗೂಲಿ ಪತ್ನಿ ಡೋನಾ ಗಂಗೋಪಾಧ್ಯಾಯ ಮತ್ತು ಅವರ ಮಗಳು ಸನಾ ಗಂಗೋಪಾಧ್ಯಾಯ ಸಾಕಷ್ಟು ಜನಪ್ರಿಯರಾಗಿದ್ದಾರೆ.
ಡೋನಾ ಗಂಗೋಪಾಧ್ಯಾಯ ಫೇಮಸ್ ಡ್ಯಾನ್ಸರ್. ಇನ್ನು ಮಗಳು ಸನಾ ಕೋಲ್ಕತ್ತಾದ ಲೊರೆಟೊ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ಬಳಿಕ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದರು.
ಲಂಡನ್’ನಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಿದ ಸನಾ, ನಂತರ ಇನೋವರ್ವ್ ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಪಡೆದಿದ್ದಾರೆ. ಈ ಬಗ್ಗೆ ಸ್ವತಃ ಗಂಗೂಲಿ ಅವರೇ ಪೋಸ್ಟ್ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
2001 ರಲ್ಲಿ ಜನಿಸಿದ ಸನಾ ಗಂಗೂಲಿ 22 ವರ್ಷಕ್ಕೆ ಇಷ್ಟೊಂದು ದೊಡ್ಡ ಕಂಪನಿಯಲ್ಲಿ ಕೆಲಸ ಪಡೆದಿದ್ದಾರೆ. ಈ ಕಂಪನಿಯು ತಮ್ಮ ಉದ್ಯೋಗಿಗಳಿಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳವನ್ನು ನೀಡುತ್ತದೆ.
ಈ ಹಿಂದೆ ಸನಾ ಡೆಲಾಯ್ಟ್ ಕಂಪನಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ವಾರ್ಷಿಕ 5 ಲಕ್ಷದಿಂದ 12 ಲಕ್ಷದವರೆಗೆ ಸಂಬಳ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.