ಭಾರತದ ಅತ್ಯಂತ ವೇಗದ ಬೌಲರ್’ಗಳಲ್ಲಿ ಮೊದಲ ಸ್ಥಾನವನ್ನು ಉಮ್ರಾನ್ ಮಲಿಕ್ ಪಡೆದಿದ್ದಾರೆ. ಕಳೆದ ವರ್ಷ ಅಂದರೆ ಐಪಿಎಲ್ 2022 ರಲ್ಲಿ 156 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದರು.
ಜಸ್ಪ್ರೀತ್ ಬುಮ್ರಾ ಕೂಡ ಗಂಟೆಗೆ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಕನ್ನಡಿಗ ಪ್ರಸೀದ ಕೃಷ್ಣ ಸಹ ಗಂಟೆಗೆ 150 ಕಿ.ಮೀಗಿಂತ ವೇಗವಾಗಿ ಬೌಲಿಂಗ್ ಮಾಡಬಲ್ಲರು. 27 ವರ್ಷದ ಅವರು ಕೇವಲ 14 ODIಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಉಮೇಶ್ ಯಾದವ್ 150 ಕಿ,ಮೀ ಅಲ್ಲದಿದ್ದರೂ ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಇನ್ನು ಟೀಂ ಇಂಡಿಯಾದ ಸ್ಟಾರ್ ಬೌಲರ್’ಗಳಲ್ಲಿ ಇವರೂ ಒಬ್ಬರು.
ಮೊಹಮ್ಮದ್ ಶಮಿ ಅವರು ತಮ್ಮ ಸ್ಕಿಡ್ ಬೌಲಿಂಗ್ ನಿಂದ ಹೆಸರುವಾಗಿಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ 153 ಕಿ,ಮೀ ವೇಗದಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು.