ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಭವ್ಯ ಬಂಗಲೆ ಒಳಾಂಗಣ ಫೋಟೋಸ್

Bhavishya Shetty
Jul 08,2024

ಐಷಾರಾಮಿ ಮನೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಾರೆ. ಕಿಂಗ್ ಕೊಹ್ಲಿ ಐಷಾರಾಮಿ ಮನೆ, ಐಷಾರಾಮಿ ಕಾರುಗಳು ಮತ್ತು ಕೋಟಿಗಟ್ಟಲೆ ಆಸ್ತಿಯ ಒಡೆಯ.

ಜೀವನಶೈಲಿ

ಮುಂಬೈನ ವರ್ಲಿಯಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್’ನಲ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ, ಮಗಳು ವಾಮಿಕಾ ಕೊಹ್ಲಿ ಮತ್ತು ಮಗ ಅಕಾಯ್ ಕೊಹ್ಲಿಯೊಂದಿಗೆ ವಾಸಿಸುತ್ತಿದ್ದಾರೆ.

ಅಪಾರ್ಟ್ಮೆಂಟ್

ವರದಿಗಳ ಪ್ರಕಾರ, ಮದುವೆಗೆ ಮೊದಲು 2016 ರಲ್ಲಿ ಈ ಮನೆಯನ್ನು ಖರೀದಿಸಿದ್ದರು. ಮದುವೆಯ ನಂತರ 2017 ರಲ್ಲಿ ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಈ ಅಪಾರ್ಟ್ಮೆಂಟ್ 7,171 ಚದರ ಅಡಿ ವಿಸ್ತಾರವಾಗಿದ್ದು, ಇದರ ಬೆಲೆ 34 ಕೋಟಿ ಎಂದು ಹೇಳಲಾಗಿದೆ.

ಸೌಲಭ್ಯಗಳು

ಈ ಅಪಾರ್ಟ್ಮೆಂಟ್’ಲ್ಲಿ ನಾಲ್ಕು ಮಲಗುವ ಕೋಣೆಗಳು ಮತ್ತು ಖಾಸಗಿ ಟೆರೇಸ್ ಇದೆ. ಇದಲ್ಲದೇ ಗಾರ್ಡನ್ ಏರಿಯಾ, ಪರ್ಸನಲ್ ಜಿಮ್ ಹೀಗೆ ಹಲವು ಸೌಲಭ್ಯಗಳು ವಿರಾಟ್ ಕೊಹ್ಲಿಯ ಈ ಮನೆಯಲ್ಲಿವೆ. ಬಿಳಿ ಮತ್ತು ಕಪ್ಪು ಬಣ್ಣದ ಮಾರ್ಬಲ್ ಫ್ಲೋರಿಂಗ್ ಇದ್ದು, ಸಾಕಷ್ಟು ವಿಶಾಲವಾಗಿದೆ.

ಸಂಪತ್ತು

ವಿರಾಟ್ ಕೊಹ್ಲಿ ಗಳಿಕೆಯ ವಿಷಯದಲ್ಲಿ ಅನೇಕ ದೊಡ್ಡ ಸೆಲೆಬ್ರಿಟಿಗಳಿಗಿಂತ ಮುಂದಿದ್ದಾರೆ. ವರದಿಗಳ ಪ್ರಕಾರ ವಿರಾಟ್ ಸಂಪತ್ತು ಸದ್ಯ 1050 ಕೋಟಿ ರೂ.

ರೆಸ್ಟೋರೆಂಟ್

ಆದಾಯದ ಮುಖ್ಯ ಮೂಲವೆಂದರೆ ಕ್ರಿಕೆಟ್. ಇದಲ್ಲದೆ, ಒನ್ 8 ಕಮ್ಯೂನ್ ಮತ್ತು ನ್ಯೂವಾ ಎಂಬ ಎರಡು ರೆಸ್ಟೋರೆಂಟ್ ಬ್ರಾಂಡ್’ಗಳ ಮಾಲೀಕರಾಗಿದ್ದಾರೆ.

ಬ್ರ್ಯಾಂಡ್ ಮೌಲ್ಯ

ವಿರಾಟ್ ಅವರ ಬ್ರ್ಯಾಂಡ್ ಮೌಲ್ಯವು ತುಂಬಾ ಹೆಚ್ಚಾಗಿದ್ದು, ಬ್ರಾಂಡ್ ಎಂಡಾರ್ಸ್ ಮೆಂಟ್’ಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

VIEW ALL

Read Next Story