ಭಾರತೀಯ ಕ್ರಿಕೆಟ್ ತಂಡವು ತನ್ನ ಅಗಾಧ ಇತಿಹಾದುದ್ದಕ್ಕೂ ಧರಿಸಿರುವ ಟಾಪ್ 10 ಜೆರ್ಸಿಗಳನ್ನು ನೋಡೋಣ:

Bhavishya Shetty
Jul 09,2023


ಟೀಂ ಇಂಡಿಯಾವು ಮೊದಲ ಬಾರಿಗೆ ಧರಿಸಿದ ಜರ್ಸಿಯು ಮಧ್ಯದಲ್ಲಿ ಮತ್ತು ಕೊರಳಪಟ್ಟಿಗಳ ಸುತ್ತಲೂ ಹಳದಿ ಬಣ್ಣವನ್ನು ಹೊಂದಿರುವ ತಿಳಿ ನೀಲಿ ಬಣ್ಣವನ್ನು ಒಳಗೊಂಡಿತ್ತು. ರೇಟಿಂಗ್: 6/10


ಈ ಕ್ಲಾಸಿ ಜೆರ್ಸಿಯು ಗಾಢ ನೀಲಿ ಬಣ್ಣವನ್ನು ಹೊಂದಿದ್ದು, ಭುಜದ ಮೇಲೆ ತಿಳಿ ನೀಲಿ ಬಣ್ಣದ ಗೆರೆಗಳು, ಎದೆಯ ಮೇಲೆ ಹಸಿರು, ಕೆಂಪು ಮತ್ತು ಬಿಳಿ ಪಟ್ಟೆಗಳನ್ನು ಹೊಂದಿದೆ. ರೇಟಿಂಗ್: 8/10


ಮೆನ್ ಇನ್ ಬ್ಲೂ ಮತ್ತೆ ಬದಲಾವಣೆ ಮಾಡಿಕೊಂಡು ತಿಳಿ ನೀಲಿ ಜರ್ಸಿ ಮಧ್ಯದಲ್ಲಿ ಬೃಹತ್ ಬಿಸಿಸಿಐ ಲೋಗೋವನ್ನು ಹಾಕಲಾಯಿತು. ಹಳದಿ ಬಣ್ಣವನ್ನು ಸಂಪೂರ್ಣವಾಗಿ ತೆಗೆದುಹಾಕಿ, ಸ್ವಚ್ಛ ಮತ್ತು ಆಕರ್ಷಕವಾದ ನೋಟವನ್ನು ಸೃಷ್ಟಿಸಿದೆ ರೇಟಿಂಗ್: 7.5/10


ಈ ಬಳಿಕ ಬಂದ ಜೆರ್ಸಿಯು ಕಡು ನೀಲಿ ವೃತ್ತಾಕಾರದ ವಿನ್ಯಾಸಗಳನ್ನು ಮತ್ತು ಆಟಗಾರರ ಹೆಸರುಗಳನ್ನು ಒಳಗೊಂಡಿತ್ತು. ಹೆಸರುಗಳನ್ನು ಹಳದಿ ಬಣ್ಣದಲ್ಲಿ ಮುದ್ರಿಸಲಾಗಿತ್ತು. ರೇಟಿಂಗ್: 6/10


ಜರ್ಸಿಯ ಮೇಲೆ ಮೊದಲ ಬಾರಿಗೆ ತ್ರಿವರ್ಣವನ್ನು ಪರಿಚಯಿಸಿದ್ದು ಈ ತಿಳಿ ನೀಲಿ ಬಣ್ಣದ ಜೆರ್ಸಿ. ರೇಟಿಂಗ್: 7/10


2002 ರ ವಿನ್ಯಾಸದಂತೆಯೇ ಈ ಜರ್ಸಿಯು ಭುಜ ಮತ್ತು ಬದಿಗಳಲ್ಲಿ ಹೆಚ್ಚುವರಿ ಕಪ್ಪು ಪಟ್ಟಿಗಳನ್ನು ಒಳಗೊಂಡಿತ್ತು,. ಟೀಂ ಇಂಡಿಯಾದ ಅಭಿಮಾನಿಗಳ ಫೇವರೇಟ್ ಜೆರ್ಸಿ ಇದಾಗಿದೆ. ರೇಟಿಂಗ್: 8/10


ಬಹುಶಃ ಈ ಎಲ್ಲಾ ಜೆರ್ಸಿಗಳಿಗಿಂತ ಈ ಜೆರ್ಸಿ ಮೇಲೆ ಟೀಂ ಇಂಡಿಯಾಗೆ ಒಲವು ಹೆಚ್ಚು. ಏಕೆಂದರೆ ಭಾರತವು 28 ವರ್ಷಗಳ ನಂತರ ವಿಶ್ವಕಪ್ ಗೆದ್ದಾಗ ಇದೇ ಜೆರ್ಸಿ ಧರಿಸಲಾಗಿತ್ತು. ರೇಟಿಂಗ್: 9/10


2011 ರ ವಿಶ್ವಕಪ್ ಜೆರ್ಸಿ ಯಂತೆಯೇ, ಈ ವಿನ್ಯಾಸವು ಕಾಲರ್ನ ಎರಡೂ ಬದಿಯಲ್ಲಿ ಕಿತ್ತಳೆ ಬಣ್ಣದ ಹೆಚ್ಚುವರಿ ಪ್ಯಾಚ್ ಗಳನ್ನು ಒಳಗೊಂಡಿದೆ. ಈ ಜೆರ್ಸಿ ಧರಿಸಿದ್ದ ಸಂದರ್ಭದಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ರೇಟಿಂಗ್: 7.5/10


ಪ್ರಾಯೋಜಕರಲ್ಲಿ ಸ್ವಲ್ಪ ಬದಲಾವಣೆಯಾದ ಬಳಿಕ ಹೊಸ ಜೆರ್ಸಿ ಟೀಂ ಇಂಡಿಯಾ ಪ್ರವೇಶಿಸಿತು. ಇದರಲ್ಲಿ BCCI ಲಾಂಛನದ ಮೇಲೆ ಮೂರು ನಕ್ಷತ್ರಗಳನ್ನು ಒಳಗೊಂಡಿತ್ತು. ಇನ್ನು ಟೀ ಇಂಡಿಯಾದ 3 ವಿಶ್ವಕಪ್ ವಿಜಯಗಳನ್ನು ಪ್ರತಿನಿಧಿಸಿದ್ದು ಇದೇ ಜೆರ್ಸಿ. ರೇಟಿಂಗ್: 8/10


T20I ಗಳ ಹೊಸ ಜೆರ್ಸಿಯಲ್ಲಿ ಮೇಲಿನ ಬಲಭಾಗದಲ್ಲಿ ಕಿತ್ತಳೆ-ಪಟ್ಟೆಯ ವಿನ್ಯಾಸವನ್ನು ಪರಿಚಯಿಸಲಾಯಿತು. ರೇಟಿಂಗ್: 8/10

VIEW ALL

Read Next Story