ವಿಶ್ವದ ಅತ್ಯಂತ ದುಬಾರಿ ಶೂ ಬಗ್ಗೆ ಕೇಳಿದ್ದೀರಾ? ಇದರ ಬೆಲೆ ಎಷ್ಟು ಗೊತ್ತಾ..?
ಯುವಕ-ಯುವತಿಯರಿಂದ ಹಿಡಿದು ಪ್ರತಿಯೊಬ್ಬರೂ ಸಹ ಶೂಗಳನ್ನು ಇಷ್ಟಪಡುತ್ತಾರೆ.
ಮದುವೆ ಇರಲಿ ಅಥವಾ ಕಚೇರಿ ಇರಲಿ ಎಲ್ಲಿಗಾದರೂ ಹೋಗಬೇಕೆಂದರೆ ಪ್ರತಿಯೊಬ್ಬರೂ ಶೂ ಅಥವಾ ಚಪ್ಪಲಿಗಳನ್ನ ಧರಿಸಬೇಕು.
ವಿಶ್ವದ ಅತ್ಯಂತ ದುಬಾರಿ ಶೂ ಬಗ್ಗೆ ನೀವು ಕೇಳಿದ್ದೀರಾ..? ಅದರ ಬೆಲೆ ಎಷ್ಟು ಅಂತಾ ತಿಳಿಸಿದರೆ ನೀವು ಶಾಕ್ ಆಗುತ್ತೀರಿ!
ವಾಸ್ತವವಾಗಿ ವಿಶ್ವದ ಅತ್ಯಂತ ದುಬಾರಿ ಶೂ ಮೂನ್ ಸ್ಟಾರ್ ಆಗಿದ್ದು, ಇದರ ಬೆಲೆ ಸುಮಾರು ₹164 ಕೋಟಿ ಕೋಟಿ.
ಈ ವಿಶೇಷ ಶೂಅನ್ನು ಶುದ್ಧ ಚಿನ್ನದಿಂದ ಮಾಡಲಾಗಿದ್ದು, ಇದರಲ್ಲಿ 30 ಕ್ಯಾರೆಟ್ ವಜ್ರಗಳನ್ನು ಬಳಸಲಾಗಿದೆ.
ಈ ವಿಶ್ವಪ್ರಸಿದ್ಧ ಶೂ ತಯಾರಿಕೆಯಲ್ಲಿ 1576ರ ಉಲ್ಕಾಶಿಲೆಯ ವಸ್ತುವನ್ನು ಬಳಸಲಾಗಿದೆ.
ಈ ಶೂಗಳನ್ನು ಮೊದಲು 2017ರಲ್ಲಿ ತಯಾರಿಸಲಾಯಿತು. ಇದನ್ನು ಇಟಾಲಿಯನ್ ಡಿಸೈನರ್ ಆಂಟೋನಿಯೊ ವಿಯೆಟ್ರಿ ರೂಪಿಸಿದ್ದಾರೆ.