ಅಂದು ಅಕೌಂಟಿನಲ್ಲಿ ಕೇವಲ 18 ರೂ. ಇದೀಗ ಕೋಟ್ಯಾಧಿಪತಿ, ಸ್ಟಾರ್‌ ಹಿರೋಯಿನ್‌ ಭಾಯ್‌ ಫ್ರೇಂಡ್‌ ಈ ನಟ..!

Vijay varma net worth : ಪ್ರತಿ ದಿನ ಸಾವಿರಾರು ಕನಸು ಹೊತ್ತು ನಟರಾಗಲು ಸಾಕಷ್ಟು ಜನ ಸಿನಿರಂಗಕ್ಕೆ ಬರುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಯಶಸ್ಸಿನ ಶಿಖರವನ್ನು ತಲುಪುತ್ತಾರೆ. ಅಂತಹ ಒಬ್ಬ ಸ್ಟಾರ್‌ ಕಥೆಯನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ.. ಬನ್ನಿ ಜಿರೋ ಇಂದ ಹೀರೋ ನಟನ ಬಗ್ಗೆ ತಿಳಿಯೋಣ..

Written by - Krishna N K | Last Updated : May 19, 2024, 09:08 PM IST
    • ಕನಸು ಹೊತ್ತು ನಟರಾಗಲು ಸಾಕಷ್ಟು ಜನ ಸಿನಿರಂಗಕ್ಕೆ ಬರುತ್ತಾರೆ.
    • ಅವರಲ್ಲಿ ಕೆಲವರು ಮಾತ್ರ ಯಶಸ್ಸಿನ ಶಿಖರವನ್ನು ತಲುಪುತ್ತಾರೆ.
    • ನಟ ಮುಂಬೈಗೆ ಕಾಲಿಟ್ಟಾಗ, ಅವರ ಖಾತೆಯಲ್ಲಿ ಕೇವಲ 18 ರೂ. ಇತ್ತು
ಅಂದು ಅಕೌಂಟಿನಲ್ಲಿ ಕೇವಲ 18 ರೂ. ಇದೀಗ ಕೋಟ್ಯಾಧಿಪತಿ, ಸ್ಟಾರ್‌ ಹಿರೋಯಿನ್‌ ಭಾಯ್‌ ಫ್ರೇಂಡ್‌ ಈ ನಟ..! title=

Vijay varma Life story : ಇಂದು ನಾವು ನಿಮಗೆ ಪರಿಚಯಿಸಲಿರುವ ನಟ ಬಾಲಿವುಡ್‌ನಲ್ಲಿ ಜನಪ್ರಿಯ ನಟ. ಇಂದು ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಆದರೆ, ಇದೇ ನಟ ಮುಂಬೈಗೆ ಕಾಲಿಟ್ಟಾಗ, ಅವರ ಖಾತೆಯಲ್ಲಿ ಕೇವಲ 18 ರೂ. ಇತ್ತು.. ಹಾಗಾದರೆ ಅವರು ಹೇಗೆ ಯಶಸ್ಸನ್ನು ಸಾಧಿಸಿದರು, ಸ್ಟಾರ್‌ ಹೇಗಾದ್ರು ತಿಳಿಯೋಣ.

ಹೌದು.. ಪ್ರತಿಭಾವಂತ ನಟ ವಿಜಯ್ ವರ್ಮಾ ಬಗ್ಗೆ ಇಷ್ಟೋತ್ತು ನಾವು ಹೇಳಿದ್ದು. ಪ್ರತಿ ಚಿತ್ರದಲ್ಲೂ ಔಟ್ ಆಫ್ ದಿ ಬಾಕ್ಸ್ ಪಾತ್ರವನ್ನು ನಿರ್ವಹಿಸಿ ಪ್ರೇಕ್ಷಕರಿಂದ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಇಂದು ವಿಜಯ್ ಬಾಲಿವುಡ್‌ನ ಪ್ರಸಿದ್ಧ ಮುಖ. ಆದರೆ ಅವರು ಕನಸಿನ ನಗರಕ್ಕೆ ಬಂದಾಗ, ಸಾಕಷ್ಟು ಕಷ್ಟಗಳನ್ನು ಎದುರಿಸಿದರು.

ಇದನ್ನೂ ಓದಿ:8ನೇ ವಯಸ್ಸಿನಲ್ಲಿ ಸಿನಿರಂಗಕ್ಕೆ ಎಂಟ್ರಿ.. ಜಾನ್ವಿ, ಕರೀನಾ, ಕಾಜೋಲ್‌ಗಿಂತೂ ಫೇಮಸ್‌&ರಿಚ್‌ ನಟಿ ಈಕೆ!!

'ಡಾರ್ಲಿಂಗ್ಸ್', 'ಜಾನೆ ಜಾನ್', 'ಗಲ್ಲಿ ಬಾಯ್', 'ಲಸ್ಟ್ ಸ್ಟೋರೀಸ್' ಮುಂತಾದ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿರುವ ವಿಜಯ್ ವರ್ಮಾ ಇಂದು ಅಗ್ರಸ್ಥಾನದಲ್ಲಿದ್ದರೂ, ಈ ಹಿಂದೆ ಸಾಕಷ್ಟು ಹೋರಾಟಗಳನ್ನು ಎದುರಿಸಿದ್ದಾರೆ. 

ಸಿನಿರಂಗಕ್ಕೆ ಕಾಲಿಟ್ಟಾಗ ವಿಜಯ್ ಖಾತೆಯಲ್ಲಿ ಕೇವಲ 18 ರೂ. ಇತ್ತು ಅಂತ ಸ್ವತಃ ವಿಜಯ್ ಅವರು ಗಲಟ್ಟಾ ಪ್ಲಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ನನ್ನ ಜೀವನೋಪಾಯಕ್ಕಾಗಿ ನಾನು ಚಿತ್ರದಲ್ಲಿ ಸಣ್ಣ ಪಾತ್ರವನ್ನು ಮಾಡಬೇಕಾಗಿತ್ತು ಎಂದು ನಟ ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ:ಆ ಅಂಕಲ್‌ ನನ್ನ ಮೆಟ್ಟಿಲುಗಳ ಮೇಲೆ ತಳ್ಳಿ, ಬಾಯಿಗೆ...! 9ನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳ ಅನುಭಸಿದ್ದ ನಟಿ

ಇಂದು ವಿಜಯ್ ವರ್ಮಾ ತಮ್ಮ ನಟನೆಯ ಮೂಲಕ ಜನರ ಹೃದಯವನ್ನು ಆಳುತ್ತಿದ್ದಾರೆ. ಸಿನಿಮಾಗಳ ಹೊರತಾಗಿ ಲವ್ ಲೈಫ್ ಬಗ್ಗೆಯೂ ಸುದ್ದಿಯಲ್ಲಿದ್ದಾರೆ. ನಟ ದಕ್ಷಿಣ ಮತ್ತು ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಆಗಾಗ್ಗೆ ಅವರ ಚಿತ್ರಗಳು ಸಹ ವೈರಲ್ ಆಗುತ್ತಿರುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News