ನೀವು ಸಮತೋಲಿತ ಆಹಾರ ಸೇವಿಸುತ್ತಿದ್ದರೂ ಕೂದಲು ಉದುರುತ್ತಿದೆಯೇ? ಪ್ರಮುಖ ಖನಿಜಗಳು ಮತ್ತು ವಿಟಮಿನ್‌ಗಳ ಕೊರತೆಯೇ ಇದಕ್ಕೆ ಮೂಲ ಕಾರಣ.
ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳ ಬಳಕೆಯಿಂದ ನೀವು ಕೂದಲು ಉದುರುವಿಕೆ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.
ಈ ಆಹಾರಗಳು ನಿಮ್ಮ ನೆತ್ತಿಗೆ ಅಗತ್ಯವಿರುವ ಖನಿಜಗಳು, ವಿಟಮಿನ್‌ಗಳನ್ನು ಒದಗಿಸಿ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸುತ್ತದೆ. ಅವುಗಳೆಂದರೆ...
ಕ್ಯಾರೆಟ್ ಸೇವನೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಬಾಹ್ಯ ಹಾನಿಗಳಿಂದ ಕೂದಲಿಗೆ ರಕ್ಷಣೆ ನೀಡುತ್ತದೆ.
ನೈಸರ್ಗಿಕ ಪ್ರೋಟೀನ್ ಒದಗಿಸಬಲ್ಲ ಮೊಟ್ಟೆಗಳು ಹಾನಿಗೊಳಗಾದ ಕೂದಲುಗಳನ್ನು ಕಂಡೀಷನಿಂಗ್ ಮಾಡುವ ಮೂಲಕ ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುವ ಓಟ್ಸ್ ಅನ್ನು ಕೂದಲಿಗೆ ಅನ್ವಯಿಸುವುದರಿಂದ ಇದು ನೆತ್ತಿಯ ತುರಿಕೆ, ಶುಷ್ಕತೆಯನ್ನು ನಿವಾರಿಸುತ್ತದೆ.
ಒಮೆಗಾ-6 ಕೊಬ್ಬಿನಾಮ್ಲಗಳು, ಕಬ್ಬಿಣ, ಸತು, ಬಿ1, ಬಿ6, ಬಿ9 ಜೀವಸತ್ವಗಳಿಂದ ಸಮೃದ್ಧವಾಗಿರುವ ವಾಲ್ನಟ್ ಅನ್ನು ನಿತ್ಯ ಸೇವಿಸುವುದರಿಂದ ಇದು ಕೂದಲು ಉದುರುವಿಕೆಯನ್ನು ತಡೆದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ನಿಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ವಿಟಮಿನ್ ಸಿ ಭರಿತ ಆಹಾರಗಳನ್ನು ತಿನ್ನುವುದರಿಂದ ಕೂದಲುದುರುವಿಕೆಯಷ್ಟೇ ಅಲ್ಲ ಕೂದಲ ಹಲವು ಸಮಸ್ಯೆಗಳಿಂದ ರಕ್ಷಣೆ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.