30 ವರ್ಷದ ನಂತರ ಮಹಿಳೆಯರಿಗೆ ಬೇಕೇ ಬೇಕು ಈ ವಿಟಮಿನ್ !

Ranjitha R K
Sep 25,2024

ವಿಟಮಿನ್ ಅಗತ್ಯ

30 ವರ್ಷ ವಯಸ್ಸಿನ ನಂತರ ಮಹಿಳೆಯರ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬರುತ್ತವೆ.ಇದರಿಂದಾಗಿ ಕೆಲವು ವಿಟಮಿನ್ ಗಳ ಅಗತ್ಯವಿರುತ್ತದೆ.

ಮೆಗ್ನಿಶಿಯಂ

ಸ್ನಾಯುಸೆಳೆತ, ರಕ್ತದೊತ್ತಡ, ಅನಿಯಮಿತ ಹೃದಯ ಬಡಿತ ಸಮಸ್ಯೆಗಳ ಪರಿಹಾರಕ್ಕೆ ಪಾಲಕ್,ಧಾನ್ಯ, ಒಣ ಹಣ್ಣು, ಮೀನು ಇತ್ಯಾದಿಗಳನ್ನು ಸೇವಿಸಬೇಕು.

ಕ್ಯಾಲ್ಷಿಯಂ

ಮೂಳೆಗಳು ಆರೋಗ್ಯಕರವಾಗಿರಲು ಹಾಲು,ಮೊಸರು, ಕಿವಿ ಹಣ್ಣು, ಮಖಾನ, ಕಿಡ್ನಿ ಬೀನ್ಸ್ ಮುಂತಾದವುಗಳನ್ನು ಸೇವಿಸಬೇಕು.

ಐರನ್

ಕಬ್ಬಿಣದ ಕೊರತೆ ನೀಗಿಸಲು ಪಾಲಕ್, ಬೀಟ್ ರೂಟ್, ಹೆಸರುಬೇಳೆ, ಬೆಲ್ಲ, ದಾಳಿಂಬೆ ಸೇವಿಸಬೇಕು.

ವಿಟಮಿನ್ ಡಿ

ದೇಹದ ಎಲ್ಲಾ ಕಾರ್ಯಗಳು ಉತ್ತಮವಾಗಿ ನಿರ್ವಹಿಸಲು ವಿಟಮಿನ್ ಡಿ ಬೇಕು. ಇದರ ಕೊರತೆ ನೀಗಿಸಲು ಅಣಬೆ, ಮೀನು, ಮೊಟ್ಟೆ, ಮೆನ್ತ್ಯೆಸೋಪ್ಪು, ಅಂಜೂರ ಸೇವಿಸಬೇಕು.

ವಿಟಮಿನ್ B 6

30 ರ ನಂತರ ವಿಟಮಿನ್ ಬಿ೬ ಕೂಡಾ ಮುಖ್ಯವಾಗಿರುತ್ತದೆ. ಇದರ ಕೊರತೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಹಾಗಾಗಿ ನಿತ್ಯ ಹಸಿರು ಎಲೆ ತರಕಾರಿಗಳನ್ನು ಸೇವಿಸಬೇಕು.

ವಿಟಮಿನ್ B 12

ವಿಟಮಿನ್ ಬಿ೧೨ ನರಗಳ ಕಾರ್ಯ ಮತ್ತು ಆರ್ ಬಿಸಿ ಉತ್ಪಾದನೆಗೆ ಮುಖ್ಯವಾಗಿರುತ್ತದೆ. ಇದರ ಕೊರೆತೆಯು ಆಯಾಸ, ಜ್ಞಾಪಕ ಶಕ್ತಿ ನಷ್ಟ, ರಕ್ತಹೀನತೆ, ಮುಂತಾದ ಸಮಸ್ಯೆಗಳನ್ನು ತಂದೊಡ್ಡಬಹುದು.

ಆಂಟಿ ಆಕ್ಸಿಡೆಂಟ್

ಇವುಗಳ ಹೊರತಾಗಿ ಆಂಟಿ ಆಕ್ಸಿಡೆಂಟ್ ಗಳಲ್ಲಿ ಸಮೃದ್ದವಾಗಿರುವ ಹಣ್ಣುಗಳನ್ನು ಸೇವಿಸಬೇಕು.


ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story