ಬಿಳಿ ಎಳ್ಳಿನಲ್ಲಿ ಹೆಚ್ಚ್ಜಿನ ಪ್ರಮಾಣದಲ್ಲಿ ಕ್ಯಾಲ್ಷಿಯಂ ಇರುತ್ತದೆ. ಇದು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.
ಬಿಳಿ ಎಳ್ಳಿನಲ್ಲಿ ಮೊನೋಸ್ಯಾಚುರೆಟೆಡ್ ಮತ್ತು ಪಾಲಿಸ್ಯಾಚುರೆಟೆಡ್ ಫ್ಯಾಟ್ ಕಂಡುಬರುತ್ತದೆ.ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಬಿಳಿ ಎಳ್ಳಿನ ಸೇವನೆಯಿಂದ ಜೀರ್ಣಕಾರಿ ವ್ಯವಸ್ಥೆ ಸುಧಾರಿಸುತ್ತದೆ.
ಬಿಳಿ ಎಳ್ಳಿನ ಸೇವನೆಯಿಂದ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
ಬಿಳಿ ಎಳ್ಳಿನಲ್ಲಿ ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.
ಬಿಳಿ ಎಳ್ಳು ತೂಕ ನಿಯಂತ್ರಿಸುವಲ್ಲಿ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ.
ಬಿಳಿ ಎಳ್ಳಿನಲ್ಲಿ ಮ್ಯಾಗ್ನೆಶಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ.
ಬಿಳಿ ಎಳ್ಳಿನಲ್ಲಿ ಇರುವ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.