ಕೊಬ್ಬರಿ ಎಣ್ಣೆ, ಹರಳೆಣ್ಣೆಯಂತೆ ಸಾಸಿವೆ ಎಣ್ಣೆಯೂ ಕೂಡ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಸಾಸಿವೆ ಎಣ್ಣೆಯಲ್ಲಿ ಫೈಟೊನ್ಯೂಟ್ರಿಯೆಂಟ್ ಗ್ಲುಕೋಸಿನೋಲೇಟ್ ಆ್ಯಂಟಿಬಯೋಟಿಕ್ ಮತ್ತು ಕಾರ್ಸಿನೋಜೆನಿಕ್ ಪೋಷಕಾಂಶಗಳಿವೆ.
ಸಾಸಿವೆ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್ ಗುಣಲಕ್ಷಣಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ. ಆಯುರ್ವೇದದ ಪ್ರಕಾರ, ಒಂದು ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿದರೂ ಹಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ನಿಯಮಿತವಾಗಿ ಒಂದು ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಾಕಿ ಲಘು ಮಸಾಜ್ ಮಾಡುವುದರಿಂದ ಆರೋಗ್ಯಕರ ಹೃದಯವನ್ನು ಹೊಂದಲು ಸಹಾಯಕ.
ಅತಿಯಾದ ಮುಟ್ಟಿನ ಸೆಳೆತ ಹೊಟ್ಟೆ ನೋವಿನ ಸಮಸ್ಯೆ ಇರುವವರು ಹೊಕ್ಕಳಿಗೆ ಒಂದೇ ಒಂದು ಡ್ರಾಪ್ ಸಾಸಿವೆ ಎಣ್ಣೆ ಹಾಕುವುದರಿಂದ ಪರಿಹಾರ ಪಡೆಯಬಹುದು.
ವಾರದಲ್ಲಿ ಒಮ್ಮೆ ಹೊಕ್ಕಳಿಗೆ ಒಂದು ಹನಿ ಸಾಸಿವೆ ಎಣ್ಣೆ ಹಾಕಿದರೆ ಮುಖದಲ್ಲಿ ಕಲೆಗಳು ನಿವಾರಣೆಯಾಗಿ ಸುಂದರ ತ್ವಚೆಯನ್ನು ಹೊಂದಬಹುದು.
ಹೊಕ್ಕಳಿಗೆ ಸಾಸಿವೆ ಏನೇಣ್ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಉದುರುವಿಕೆ, ಸ್ಪ್ಲಿಟ್ ಹೇರ್ ನಂತಹ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು.
ಸಾಸಿವೆ ಎಣ್ಣೆಯ ಒಂದು ಹನಿಯನ್ನು ಹೊಕ್ಕಳಿಗೆ ಹಾಕುವುದರಿಂದ ಹೊಕ್ಕಳಿನಲ್ಲಿ ಸಂಗ್ರಹವಾಗುವ ಕೊಳೆ ಸುಲಭವಾಗಿ ಸ್ವಚ್ಛವಾಗಿ ಸೋಂಕುಗಳಿಂದ ರಕ್ಷಣೆ ದೊರೆಯುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.