ಚಿಯಾ ಬೀಜ, ದ್ವಿದಳ ಧಾನ್ಯ, ಬೀನ್ಸ್, ಬಾದಾಮಿ ಬೆನ್ನು ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.
ಸೀ ಫುಡ್ ನಲ್ಲಿ ಸಿಗುವ ಪ್ರೋಟೀನ್ ಬೆನ್ನು ಮೂಳೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಸಾಲ್ಮಾನ್ ಫಿಶ್ ಬೆನ್ನು ಹುರಿಯ ಆರೋಗ್ಯವನ್ನು ಕಾಪಾಡುತ್ತದೆ. ಇದು ಮೂಳೆಯ ಡೆನ್ಸಿಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಬೆನ್ನು ಮೂಳೆಯ ಆರೋಗ್ಯಕ್ಕೆ ಡೈರಿ ಉತ್ಪನ್ನಗಳನ್ನು ಸೇವಿಸುವುದು ಬಹಳ ಮುಖ್ಯ. ಇದರಲ್ಲಿ ಕ್ಯಾಲ್ಶಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಆದುದರಿಂದ ಇದು ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.
ಹಣ್ಣುಗಳು ಆಂಟಿ ಆಕ್ಸಿಡೆಂಟ್ ಗಳು ಮತ್ತು ಪೋಷಕಾಂಶಗಳಲ್ಲಿ ಸಮೃದ್ದವಾಗಿವೆ. ಇವುಗಳು ಬೆನ್ನು ಮೂಳೆ ಬಲಪಡಿಸುತ್ತದೆ.
ಎಲೆ ಕೋಸು, ಗೆಡ್ಡೆ ಕೋಸು,ಪಾಲಕ್ ಇವು ಬೆನ್ನು ಮೂಳೆ ಬಲಪಡಿಸಲು ಅಗತ್ಯ ಆಹಾರ.
ಅರಶಿನದಂಥಹ ಮಸಲೆಗಳು ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
ಶುಂಟಿ, ತುಳಸಿ, ರೋಸ್ಮರಿ, ಚಕ್ಕೆ ಈ ಮಸಾಲೆಗಳು ಬೆನ್ನು ಹುರಿ ಮೂಳೆ ಬಲಪಡಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.