ಮಸಾಲೆಯಾಗಿ ಬಳಸುವ ಕಾಳು ಮೆಣಸು ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಆಹಾರದ ರುಚಿ ಹೆಚ್ಚಿಸುವ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು.
2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ.
ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಸೀನು & ತಲೆನೋವು ನಿಯಂತ್ರಣಕ್ಕೆ ಬರುತ್ತದೆ.
ದೃಷ್ಟಿ ದೋಷವಿರುವವರು ಪ್ರತಿದಿನ ಬೆಳಗ್ಗೆ ಕಾಳು ಮೆಣಸಿನ ಪುಡಿ ಜೊತೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ತಿನ್ನುವುದು ಉತ್ತಮ.
ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣಸಿನ ಪುಡಿಯನ್ನು ಮೊಸರು ಹಾಗೂ ಬೆಲ್ಲದ ಜೊತೆ ಸೇರಿಸಿ ಸೇವಿಸಬೇಕು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿರುವವರು 1 ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಕುಡಿಯಬೇಕು.
ಹೊಟ್ಟೆ ಉಬ್ಬರ, ಹುಳಿ ತೇಗು, ಗಂಟಲು ಸೋಂಕಿದ್ದಲ್ಲಿ ನೀರಿಗೆ ಕಾಳು ಮೆಣಸಿನ ಪುಡಿ, ನಿಂಬೆ ರಸ, 1/2 ಚಮಚ ಉಪ್ಪು ಸೇರಿಸಿ ಕುಡಿಯಬೇಕು.