ನೆಲ್ಲಿಕಾಯಿ ಅನೇಕ ಪೋಷಕ ತತ್ವಗಳನ್ನು ಒಳಗೊಂಡಿದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.
ನೆಲ್ಲಿಕಾಯಿಯಲ್ಲಿ ಫೈಬರ್ ಪ್ರಮಾಣ ಹೆಚ್ಚಾಗಿ ಇರುತ್ತದೆ.ಇದನ್ನು ಒಂದು ತಿಂಗಳವರೆಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ.ಇದನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ನೆಲ್ಲಿಕಾಯಿ ಇನ್ಸುಲಿನ್ ಬಿಡುಗಡೆಗೆ ಸಹಾಯ ಮಾಡುತ್ತದೆ.ಇದು ಆಹಾರ ಸೇವನೆ ನಂತರ ಶುಗರ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಒಂದು ತಿಂಗಳವರೆಗೆ ನಿರಂತರವಾಗಿ ನೆಲ್ಲಿಕಾಯಿ ತಿಂದರೆ ಚಯಾಪಚಯ ಸುಧಾರಿಸುತ್ತದೆ.ಇದು ದೇಹದ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ಮೂತ್ರದ ಪ್ರಮಾಣವನ್ನು ನಿಯಂತ್ರಿಸುತ್ತದೆ.ಇದು ಯೂರಿನ್ ಇನ್ಫೆಕ್ಷನ್ ಆಗದಂತೆ ತಡೆಯುತ್ತದೆ.
ನೆಲ್ಲಿಕಾಯಿಯಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಕಂಡು ಬರುತ್ತದೆ.ಇದರ ಸೇವನೆಯಿಂದ ಶರೀರದಲ್ಲಿ ಹಿಮೊಗ್ಲೋಬಿನ್ ಕೊರತೆ ಕಂಡುಬರುವುದಿಲ್ಲ.
ನೆಲ್ಲಿಕಾಯಿ ಕೊಲೆಜನ್ ಹೆಚ್ಚಿಸುವ ಕೆಲಸ ಮಾಡುತ್ತದೆ. ಹೀಗಾಗಿ ಇದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.
ಸೂಚನೆ:ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.