ಮಹಿಳೆಯರ ಆರೋಗ್ಯಕ್ಕೆ ತುಂಬಾ ಅಗತ್ಯ ಈ 5 ವಿಟಮಿನ್

ಮಹಿಳೆ ಆರೋಗ್ಯ

ಮನೆ, ಹೊರಗೆ ಎಲ್ಲೆಡೆ ದುಡಿಯುವ ಹೆಣ್ಣು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ಮಹಿಳೆಯರಿಗೆ ವಿಟಮಿನ್ಗಳು

ಮಹಿಳೆಯರು ತಮ್ಮ ವಯಸ್ಸು ಹಾಗೂ ತೂಕಕ್ಕೆ ಅನುಗುಣವಾಗಿಯೇ ದೈನಂದಿನ ಆಹಾರದಲ್ಲಿ ವಿಟಮಿನ್ಗಳನ್ನು ಬಳಸುವುದು ಅಗತ್ಯ.

ಅಗತ್ಯ ವಿಟಮಿನ್ಗಳು

ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರ ಆರೋಗ್ಯಕ್ಕೆ 5 ವಿಟಮಿನ್ಗಳನ್ನು ಅತ್ಯಗತ್ಯ ಎಂತಲೇ ಹೇಳಲಾಗುತ್ತದೆ. ಅವುಗಳೆಂದರೆ, ವಿಟಮಿನ್ ಎ, ವಿಟಮಿನ್ ಬಿ 2, ವಿಟಮಿನ್ ಬಿ 6, ವಿಟಮಿನ್ ಬಿ 7, ವಿಟಮಿನ್ ಬಿ 9.

ವಿಟಮಿನ್ ಎ

ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ವಿಟಮಿನ್ ಎ ಮಹಿಳೆಯರ ಮೂಳೆಗಳು, ಹಲ್ಲುಗಳು, ಮೃದು ಅಂಗಾಂಶಗಳು, ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ದೀರ್ಘಕಾಲದ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೃಷ್ಟಿಯನ್ನು ಕೂಡ ಸುಧಾರಿಸುತ್ತದೆ.

ವಿಟಮಿನ್ ಬಿ 2

ಮಹಿಳೆಯರಿಗೆ ವಿಟಮಿನ್ ಬಿ2 ಕಣ್ಣುಗಳು ಮಸುಕಾಗುವುದು, ನಾಲಿಗೆ, ಗಂಟಲು ನೋವು, ಬಾಯಿ ಹುಣ್ಣು, ತುಟಿಗಳ ಮೇಲೆ ಬಿರುಕುಗಳು, ಒಣ ಕೂದಲಿನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ವಿಟಮಿನ್ ಬಿ 6

ಈ ಜೀವಸತ್ವವು ಮಹಿಳೆಯರಲ್ಲಿ ಪ್ರಮುಖವಾಗಿ ದೇಹದ ಹಾರ್ಮೋನುಗಳು ಮತ್ತು ಮೆದುಳಿನ ರಾಸಾಯನಿಕಗಳನ್ನು ಉತ್ಪಾದಿಸಲು, ಖಿನ್ನತೆಯಿಂದ ಹೊರಬರಲು ಸಹಕಾರಿ ಆಗಿದೆ.

ವಿಟಮಿನ್ ಬಿ7

ಬಯೋಟಿನ್ ಎಂದೂ ಕರೆಯಲ್ಪಡುವ ವಿಟಮಿನ್ ಬಿ7 ಜೀವಕೋಶಗಳ ಬೆಳವಣಿಗೆಗೆ ಮತ್ತು ಕೊಬ್ಬಿನಾಮ್ಲಗಳ ಸಂಶ್ಲೇಷಣೆಗೆ ಅಗತ್ಯವಾಗಿರುತ್ತದೆ. ಅಷ್ಟೇ ಅಲ್ಲ ಇದು, ಮಹಿಳೆಯರಲ್ಲಿ ಸಾಮಾನ್ಯ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ವಿಟಮಿನ್ ಬಿ9

ಫೋಲಿಕ್ ಆಸಿಡ್ ಎಂದು ಕರೆಯಲ್ಪಡುವ ವಿಟಮಿನ್ ಬಿ 9 ಪ್ರತಿ ಮಹಿಳೆಗೆ ಅವಶ್ಯಕವಾಗಿದೆ. ಇದು ಹೃದ್ರೋಗ, ಅಧಿಕ ರಕ್ತದೊತ್ತಡ, ಆಲ್ಝೈಮರ್ಸ್, ಖಿನ್ನತೆ, ಕ್ಯಾನ್ಸರ್ ಮತ್ತು ಜ್ಞಾಪಕ ಶಕ್ತಿ ನಷ್ಟವನ್ನು ತಡೆಯಲು ಸಹಾಯಕವಾಗಿದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story