ಉದುರುವುದನ್ನು ತಡೆದು ಕೂದಲು ದಪ್ಪ ಬೆಳೆಯಬೇಕಾದರೆ ಕರಿಬೇವಿನ ಎಲೆಗಳನ್ನು ಬಳಸಬೇಕು.
ಕರಿಬೇವಿನ ಎಲೆಗಳು ಕೂದಲಿನ ಆರೋಗ್ಯಕ್ಕೆ ವರ ಇದ್ದ ಹಾಗೆ. ಇದು ಕೂದಲಿನ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಹಿಡಿ ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ.ನೀರಿನ ಬಣ್ಣ ಬದಲಾದಾಗ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ರಾತ್ರಿ ಅಥವಾ ಬೆಳಿಗ್ಗೆ ಸ್ನಾನಕ್ಕೆ ಮೊದಲು ಈ ನೀರನ್ನು ಕೂದಲಿಗೆ ಸ್ಪ್ರೇ ಮಾಡಿ. ನಂತರ ನೆತ್ತಿಯ ಮೇಲೆ ಚೆನ್ನಾಗಿ ಮಸಾಜ್ ಮಾಡಿ.
ಹೀಗೆ ಕರಿಬೇವಿನ ನೀರನ್ನು ನಿಯಮಿತವಾಗಿ ಬಳಸುವುದರಿಂದ ಕೂದಲಿನ ಬೇರು ಸದೃಢವಾಗಿ ಕೂದಲು ಉದುರುವುದು ನಿಲ್ಲುತ್ತದೆ.
ಒಂದು ಚಮಚ ಮೆಂತ್ಯೆಯನ್ನು ನೀರಿನಲ್ಲಿ ನೆನೆ ಹಾಕಿ ಬೆಳ್ಳಿಗೆ ಈ ಮೆಂತ್ಯೆ ಮತ್ತು ಕರಿಬೇವನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ.
ಕರಿಬೇವನ್ನು ನಿಯಮಿತ ರೂಪದಲ್ಲಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.
ಒಣ ಕೂದಲು, ನಿರ್ಜೀವ ಕೂದಲು ಮತ್ತೆ ಕಾಂತಿಯುತವಾಗಿ ನಳನಳಿಸುವಂತೆ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ,ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.