ನೀವು ಹೆಚ್ಚಾಗಿ ನಿಂಬೆಹಣ್ಣನ್ನು ಬಳಸ್ತೀರಾ? ಈ ದುಷ್ಪರಿಣಾಮಗಳ ಬಗ್ಗೆಯೂ ತಿಳಿದಿರಲಿ

Yashaswini V
Aug 23,2024

ನಿಂಬೆ ಹಣ್ಣು

ನಿಂಬೆಹಣ್ಣಿನ ಬಳಕೆ ಆರೋಗ್ಯಕ್ಕೆ ತುಂಬಾ ಲಾಭದಾಯಕ ಎಂಬುದರಲ್ಲಿ ಎರಡು ಮಾತೇ ಇಲ್ಲ.

ನಿಂಬೆಯ ದುಷ್ಪರಿಣಾಮ

ಅತಿಯಾದರೆ ಅಮೃತವೂ ವಿಷ ಎಂಬಂತೆ ನಿಂಬೆ ಹಣ್ಣಿನ ಅತಿಯಾದ ಬಳಕೆಯೂ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು.

ಹೊಟ್ಟೆ ಸಮಸ್ಯೆ

ಹಸಿ ನಿಂಬೆ ಹಣ್ಣನ್ನು ಹೆಚ್ಚಾಗಿ ಬಳಸುವುದರಿಂದ ಇದು ಜೀರ್ಣಾಂಗವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಇದರಿಂದ ಹೊಟ್ಟೆ ನೋವಿನ ಸಮಸ್ಯೆಯೂ ಬಾಧಿಸಬಹುದು.

ಗ್ಯಾಸ್ಟ್ರಿಕ್

ನಿಂಬೆ ಹಣ್ಣಿನ ಅತಿಯಾದ ಬಳಕೆಯೂ ಕೆಳ ಅನ್ನನಾಳದ ಸ್ಪಿಂಕ್ಟರ್ ಅನ್ನು ದುರ್ಬಲಗೊಳಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಿಸಬಹುದು.

ಹೊಟ್ಟೆ ಹುಣ್ಣು

ಹೇರಳವಾಗಿ ನಿಂಬೆಹಣ್ಣಿನ ಸೇವನೆಉ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸಿ, ಹೊಟ್ಟೆಯ ಹುಣ್ಣಿಗೆ ಕಾರಣವಾಗಬಹುದು.

ಕಿಡ್ನಿ ಸ್ಟೋನ್

ನಿಂಬೆ ಸಿಪ್ಪೆಗಳಲ್ಲಿ ಅಪಾರ ಪ್ರಮಾಣದ ಆಕ್ಸಲೇಟ್‌ಗಳಿವೆ. ಇದರ ಅತಿಯಾದ ಬಳಕೆ ಮೂತ್ರಪಿಂಡಗಳಲ್ಲಿ ಕಲ್ಲಿನ ಸಮಸ್ಯೆಗೆ ಕಾರಣವಾಗಬಹುದು.

ಮೈಗ್ರೇನ್

ನಿಂಬೆ ಹಣ್ಣು ಟೈರಮೈನ್ ಎಂಬ ಗಣನೀಯ ಪ್ರಮಾಣದ ಅಮೈನೋ ಆಮ್ಲವನ್ನು ಹೊಂದಿದ್ದು ಇದು ಮೈಗ್ರೇನ್ ಉಲ್ಬಣಕ್ಕೆ ಕಾರಣವಾಗಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story