ದಿಂಬಿನ ಕೆಳಗೆ ಈ ತರಕಾರಿ ಇಟ್ಟು ಮಲಗಿದರೆ ಗಾಢ ನಿದ್ದೆ ಬರುವುದು!

Ranjitha R K
Dec 25,2024

ಗಾಢ ನಿದ್ದೆಗೆ ಉಪಾಯ

ಕೆಲವರಿಗೆ ರಾತ್ರಿ ಮಲಗಿದರೆ ಎಷ್ಟು ಹೊತ್ತಾದರೂ ನಿದ್ದೆಯೇ ಬರುವುದಿಲ್ಲ. ನಿದ್ದೆ ಬಂದರೂ ಮಧ್ಯ ರಾತ್ರಿ ಎಚ್ಚರವಾಗಿ ಬಿಡುತ್ತದೆ.

ಮನೆ ಮದ್ದು

ಕೆಲವು ಮನೆ ಮದ್ದು ಅನುಸರಿಸುವುದರಿಂದ ಗಾಢ ನಿದ್ದೆ ಆವರಿಸುವಂತೆ ಮಾಡಬಹುದು.

ನಿದ್ದೆಗೆ ಮದ್ದು

ಮಧ್ಯರಾತ್ರಿ ಎಚ್ಚರವಾದರೆ ಮತ್ತೆ ಬೆಳಗಾಗುವವರೆಗೆ ನಿದ್ದೆ ಹತ್ತಿರವೂ ಸುಳಿಯುವುದಿಲ್ಲ. ನಿದ್ದೆ ಸರಿಯಾಗಿ ಬಾರದೇ ಹೋದರೆ ಮಾರನೇ ದಿನವಿಡೀ ಹಾಳಾಗುತ್ತದೆ.

ಶಾಂತ ನಿದ್ದೆ

ಮನಸ್ಸಿನಲ್ಲಿ ಎಂಥ ಯೋಚನೆ ಇದ್ದರೂ ಆ ಯೋಚನೆಗಳೆಲ್ಲಾ ಸರಿದು ಮನಸ್ಸು ಶಾಂತವಾಗಿ ನಿದ್ದೆ ಆವರಿಸಲು ಈ ವಿಧಾನ ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ

ಮಲಗುವಾಗ ದಿಂಬಿನ ಅಡಿಯಲ್ಲಿ ಒಂದು ಎಸಳು ಬೆಳ್ಳುಳ್ಳಿ ಇಟ್ಟು ಮಲಗಿದರೆ ದಿಂಬು ಸೋಕುತ್ತಿದ್ದ ಹಾಗೆ ಗಾಢ ನಿದ್ದೆ ಆವರಿಸಿ ಬಿಡುತ್ತದೆ.

ನಿದ್ದೆಗೆ ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸಲ್ಫರ್ ಇದ್ದು, ಇದರ ಬಲವಾದ ವಾಸನೆ ಮನಸ್ಸನ್ನು ಶಾಂತವಾಗಿಸುತ್ತದೆ. ಎಂಥ ಯೋಚನೆ ಇದ್ದರೂ ಇದೆಲ್ಲವನ್ನೂ ಬದಿಗೆ ಸರಿಸಿ ಗಾಢವಾದ ನಿದ್ದೆ ಆವರಿಸಲು ಸಹಾಯ ಮಾಡುತ್ತದೆ.

ನಿದ್ರೆಯ ಗುಣಮಟ್ಟ ಸುಧಾರಣೆ

ಬೆಳ್ಳುಳ್ಳಿಯನ್ನು ದಿಂಬಿನ ಕೆಳಗೆ ಇಡುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ಇದು ರಾತ್ರಿ ಮಲಗಿದರೆ ಮುಂಜಾನೆವರೆಗೆ ಚೆನ್ನಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ.

ನೈಸರ್ಗಿಕ ಪರಿಹಾರ

ಅಲ್ಲದೆ ಬೆಳ್ಳುಳ್ಳಿ ಸೊಳ್ಳೆಗಳು, ಕೀಟಗಳನ್ನು ಕೂಡಾ ಕೋಣೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ. ನಿದ್ರಾಹೀನತೆಯನ್ನು ನೈಸರ್ಗಿಕವಾಗಿ ನಿವಾರಿಸಲು ಬೆಳ್ಳುಳ್ಳಿಯೇ ಪರಮ ಔಷಧ.


ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story