ಬೇವಿನ ಮರದ ಪ್ರತಿಯೊಂದು ಭಾಗವು ನಮಗೆ ತುಂಬಾ ಉಪಯುಕ್ತವಾಗಿದೆ. ಆಯುರ್ವೇದ ತಜ್ಞರು ಹೇಳುವಂತೆ ಬೇವಿನ ಎಲೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ಬೇವಿನ ಮರದ ಸುತ್ತಮುತ್ತಲಿನ ಗಾಳಿಯ ಮೂಲಕ ನಾವು ಶುದ್ಧ ಆಮ್ಲಜನಕವನ್ನು ಪಡೆಯುತ್ತೇವೆ. ಬೇವಿನ ಬೀಜಗಳು, ಎಲೆಗಳು, ಹೂವುಗಳು ಮತ್ತು ತೊಗಟೆಯಿಂದ ಅನೇಕ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಬಹುದು
ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನೆಲೆಯನ್ನು ಜಗಿಯುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆಯ ವೇಗ ಹೆಚ್ಚುತ್ತದೆ. ಇದು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ದೇಹದಲ್ಲಿ ಕ್ಯಾಲೋರಿಗಳು ಸಹ ಕರಗುತ್ತವೆ. ಹೀಗೆ ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಬೇವಿನ ಎಲೆಗಳಿಂದ ತಯಾರಿಸಿದ ಕಷಾಯವು ಕೆಮ್ಮು ಮತ್ತು ಗಂಟಲು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಷಾಯಕ್ಕೆ ಸ್ವಲ್ಪ ಅರಿಶಿನ, ಉಪ್ಪು, ಜೀರಿಗೆ, ಧನಿಯಾ ಪುಡಿ ಮತ್ತು ಶುಂಠಿ ಸೇರಿಸಿಯೂ ಕುಡಿಯಬಹುದು.
ಮನೆಯಲ್ಲಿ ಸೊಳ್ಳೆಗಳು ಹೆಚ್ಚಾದಾಗ ಬೇವಿನ ಎಲೆಯ ಸಹಾಯದಿಂದ ಓಡಿಸಬಹುದು. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಮನೆಯ ಸುತ್ತ ಸಿಂಪಡಿಸಿದ. ಹೀಗೆ ಮಾಡಿದರೆ ಸೊಳ್ಳೆಗಳು ಬರುವುದಿಲ್ಲ
ತಲೆನೋವು ಬಂದರೆ ಸಾಕು.. ತಲೆ ಭಾರವಾಗುತ್ತದೆ. ಯಾವುದೇ ಕೆಲಸ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಸ್ವಲ್ಪ ಬೇವನ್ನು ನುಣ್ಣಗೆ ರುಬ್ಬಿ ಮಿಶ್ರಣವನ್ನು ಹಣೆಯ ಮೇಲೆ ಹಚ್ಚಿ. ಹೀಗೆ ಒಂದು ಗಂಟೆ ಇಟ್ಟು ತೊಳೆದರೆ ತಲೆನೋವು ಕಡಿಮೆಯಾಗುತ್ತದೆ.
ರಾತ್ರಿ ಬೇವಿನ ಸೊಪ್ಪನ್ನು ನೀರಿಗೆ ಹಾಕಿ ಬೆಳಗ್ಗೆ ಆ ನೀರನ್ನು ಕುಡಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಹಾಗೆಯೇ ಬೇವಿನ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಅದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿದರೆ ಮುಖದ ತ್ವಚೆ ಕಾಂತಿಯುತವಾಗುತ್ತದೆ. ಜೊತೆಗೆ ಮುಖದ ಮೇಲಿನ ಮೊಡವೆಗಳು ಮತ್ತು ಕಲೆಗಳು ಮಾಯವಾಗುತ್ತವೆ.
ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.