ಕೆಂಪು ಬೆಂಡೆಕಾಯಿ

ಸಾಮಾನ್ಯವಾಗಿ ಆರೋಗ್ಯ ಚೆನ್ನಾಗಿರಲು ಹೆಚ್ಚಾಗಿ ತರಕಾರಿಗಳನ್ನು ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ತರಕಾರಿಗಳಲ್ಲಿ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗಿರುತ್ತದೆ.

Bhavishya Shetty
Jun 21,2023

ಕೆಂಪು ಬೆಂಡೆಕಾಯಿ

ಇನ್ನು ನೀವು ಎಂದಾದರೂ ಕೆಂಪು ಬೆಂಡೆಕಾಯಿ ಬಗ್ಗೆ ಕೇಳಿದ್ದೀರ. ಇದನ್ನು ಕೊಂಚ ದುಬಾರಿ ಬೆಲೆಗೆ ಮಾರಲಾಗುತ್ತದೆ.

ಕೆಂಪು ಬೆಂಡೆಕಾಯಿ

ಹಸಿರು ಬೆಂಡೆಕಾಯಿ ಮತ್ತು ಕೆಂಪು ಬೆಂಡೆಕಾಯಿಯ ನಡುವೆ ಆರೋಗ್ಯಕ್ಕೆ ಯಾವ ತರಕಾರಿ ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ.

ಕೆಂಪು ಬೆಂಡೆಕಾಯಿ

ಕೆಂಪು ಬೆಂಡೆಕಾಯಿಯನ್ನು ‘ಕಾಶಿ ಲಾಲಿಮಾ ಭಿಂಡಿ’ ಎಂದೂ ಕರೆಯುತ್ತಾರೆ. ಹೀಗೆ ಕರೆಯಲು ಕಾರಣ ಇದನ್ನು ಕೆಲವು ವರ್ಷಗಳ ಹಿಂದೆ ವಾರಣಾಸಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವೆಜಿಟೇಬಲ್ಸ್ ತಯಾರಿಸಿದೆ.

ಕೆಂಪು ಬೆಂಡೆಕಾಯಿ

ಕ್ಲೋರೊಫಿಲ್ ನಿಂದಾಗಿ ಸಾಮಾನ್ಯ ಬೆಂಡೆಕಾಯಿಯ ಬಣ್ಣವು ಹಸಿರು ಬಣ್ಣದ್ದಾಗಿದೆ. ಅದೇ ರೀತಿ ಆಂಥೋಸಯಾನಿನ್ ಎಂಬ ವರ್ಣದ್ರವ್ಯದಿಂದಾಗಿ ಈ ಬೆಂಡೆಕಾಯಿಯ ಬಣ್ಣವು ಕೆಂಪು ಬಣ್ಣದ್ದಾಗಿರುತ್ತದೆ.

ಕೆಂಪು ಬೆಂಡೆಕಾಯಿ

ಕೆಂಪು ಬೆಂಡೆಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ಕಬ್ಬಿಣಂಶವನ್ನು 30% ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಕೆಂಪು ಬೆಂಡೆಕಾಯಿ

ವಿಟಮಿನ್ ಬಿ ಮತ್ತು ಫೋಲೇಟ್ ಕೆಂಪು ಬೆಂಡೆಕಾಯಿಯಲ್ಲಿ ಅಧಿಕವಾಗಿದೆ, ಆದ್ದರಿಂದ ಗರ್ಭಿಣಿಯರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಕೆಂಪು ಬೆಂಡೆಕಾಯಿ

ಟೈಪ್ -2 ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.

VIEW ALL

Read Next Story