ಮೂತ್ರಪಿಂಡವು ನಮ್ಮ ರಕ್ತವನ್ನು ಸ್ವಚ್ಛಗೊಳಿಸುತ್ತದೆ ಮತ್ತು ದೇಹದಿಂದ ಕೊಳೆಯನ್ನು ತೆಗೆದುಹಾಕುತ್ತದೆ.
ಮೂತ್ರಪಿಂಡಗಳು ಕೆಟ್ಟು ಹೋದರೆ ಸಾವು ಕೂಡ ಸಂಭವಿಸಬಹುದು.
ಅನಗತ್ಯವಾಗಿ ಆಯಾಸವಾಗುವುದು ಕೂಡ ಮೂತ್ರಪಿಂಡ ವೈಫಲ್ಯದ ಸಂಕೇತವಾಗಿದೆ
ಮೂತ್ರಪಿಂಡ ವೈಫಲ್ಯವಾದರೆ ನಿಮಗೆ ಹಸಿವಾಗುವುದಿಲ್ಲ ಮತ್ತು ರಾತ್ರಿ ನಿದ್ದೆಯೇ ಬರುವುದಿಲ್ಲ.
ನಿಮಗೆ ಉಸಿರಾಟದ ತೊಂದರೆ ಎದುರಾಗುತ್ತದೆ ಮತ್ತು ಪಾದಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.
ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಮಾಂಸದ ಸ್ನಾಯುಗಳಲ್ಲಿ ನೋವು ಕಾಣಿಸುತ್ತದೆ.
ಮೂತ್ರ ಮಾಡುವ ಪ್ರಕ್ರಿಯೆಗೆ ಅಡ್ಡಿಯುಂಟಾಗುತ್ತದೆ ಮತ್ತು ಹಠಾತ್ ತೂಕ ನಷ್ಟವಾಗುತ್ತದೆ.
ದೇಹದಲ್ಲಿ ವಿಶೇಷವಾಗಿ ಮುಖದ ಮೇಲೆ ಊತ ಉಂಟಾಗುತ್ತದೆ ಹಾಗೂ ಕಾರಣವಿಲ್ಲದೆ ವಾಕರಿಕೆ ಮತ್ತು ವಾಂತಿಯಾಗುತ್ತದೆ.