ವಾರಕ್ಕೆ ಒಂದು ಗ್ಲಾಸ್‌ ದಾಳಿಂಬೆ ಜ್ಯೂಸ್‌... ಆರೋಗ್ಯಕ್ಕೆ ನೀಡುತ್ತೆ ಈ ಎಲ್ಲಾ ಲಾಭಗಳು

Published by: Bhavishya Shetty | Aug 19, 2024

ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತೂಕ ಹೆಚ್ಚಳವಾಗುತ್ತಿದೆ. ಹೆಚ್ಚಿನ ತೂಕ ಇಳಿಸಲು ವ್ಯಾಯಾಮ ಮತ್ತು ವಾಕಿಂಗ್ ಮಾಡುವುದನ್ನು ನೋಡಬಹುದು. ಆದರೆ ತೂಕ ಕಳೆದುಕೊಳ್ಳಲು ಎಷ್ಟು ದೈಹಿಕ ಚಟುವಟಿಕೆ ಅಗತ್ಯವೋ ಆಹಾರವೂ ಅಷ್ಟೇ ಮುಖ್ಯ ಎನ್ನುತ್ತಾರೆ ಪೌಷ್ಟಿಕತಜ್ಞರು.

Published by: Bhavishya Shetty | Aug 19, 2024

ತೂಕ

ತೂಕ ಇಳಿಸಿಕೊಳ್ಳಲು ಬಯಸುವವರು ದಾಳಿಂಬೆ ರಸವನ್ನು ಸೇವಿಸಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು. ಸಾಮಾನ್ಯವಾಗಿ, ದಾಳಿಂಬೆ ತಿನ್ನುವುದಕ್ಕಿಂತ ಅದರ ಜ್ಯೂಸ್‌ ಕುಡಿಯುವುದು ತುಂಬಾ ಪ್ರಯೋಜನಕಾರಿ

Published by: Bhavishya Shetty | Aug 19, 2024

ಚಯಾಪಚಯ

ದಾಳಿಂಬೆಯು ಆಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳು ಮತ್ತು ಲಿನೋಲೆನಿಕ್ ಆಮ್ಲಗಳಂತಹ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಇವು ಚಯಾಪಚಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಇದು ಕೊಬ್ಬನ್ನು ಸುಡುವ ಸೂಪರ್ ಪವರ್ʼನಂತೆ ಕೆಲಸ ಮಾಡುತ್ತದೆ.

Published by: Bhavishya Shetty | Aug 19, 2024

ಹಸಿವಿನ ಸಮಸ್ಯೆ

ತೂಕ ಇಳಿಸುವಲ್ಲಿ ಹಸಿವು ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ತಿನ್ನಬೇಕೆಂದುಕೊಂಡರೂ ಸಹ, ಹೆಚ್ಚು ತಿನ್ನುತ್ತೇವೆ. ಅಂತಹ ಸಮಯದಲ್ಲಿ ದಾಳಿಂಬೆ ಜ್ಯೂಸ್ ಕುಡಿದರೆ ಹಸಿವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಿಂದ ಅಧಿಕ ತೂಕದ ಸಮಸ್ಯೆ ದೂರವಾಗುತ್ತದೆ.

Published by: Bhavishya Shetty | Aug 19, 2024

ಕಡಿಮೆ ಕ್ಯಾಲೋರಿ

ದಾಳಿಂಬೆ ರಸವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಕೆಲವು ವರದಿಗಳ ಪ್ರಕಾರ, 100 ಗ್ರಾಂ ದಾಳಿಂಬೆ ಬೀಜಗಳು ಕೇವಲ 83 ಕ್ಯಾಲೊರಿಗಳನ್ನು ಹೊಂದಿರುತ್ತವೆ. ಈ ಕ್ಯಾಲೋರಿಗಳು ಕಾರ್ಬೋಹೈಡ್ರೇಟ್‌ಗಳಿಂದಲೂ ಬರುತ್ತವೆ. ಹಾಗಾಗಿ ಈ ಜ್ಯೂಸ್ ನಿಂದ ಕಡಿಮೆ ಕ್ಯಾಲೋರಿ ಸೇವನೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

Published by: Bhavishya Shetty | Aug 19, 2024

ಪರ್ಯಾಯ

ದಾಳಿಂಬೆ ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ. ಆದ್ದರಿಂದ ನೀವು ಪ್ಯಾಕ್ ಮಾಡಿದ ಜ್ಯೂಸ್, ಕೋಲಾ, ಸೋಡಾ ಇತ್ಯಾದಿಗಳಿಗೆ ಪರ್ಯಾಯವಾಗಿ ದಾಳಿಂಬೆ ರಸವನ್ನು ಕುಡಿಯಬಹುದು.

Published by: Bhavishya Shetty | Aug 19, 2024

ಫೈಬರ್

ಮಧ್ಯಮ ಗಾತ್ರದ ದಾಳಿಂಬೆ 10 ಗ್ರಾಂ ಆಹಾರದ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ತೆಗೆದುಕೊಂಡ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

Published by: Bhavishya Shetty | Aug 19, 2024

ಸೂಚನೆ

ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

Published by: Bhavishya Shetty | Aug 19, 2024

VIEW ALL

Read Next Story