ಚಹಾ ಪುಡಿಯನ್ನು ಬೇಯಿಸಿದ ನೀರು ಕೂದಲಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಕೂದಲಿಗೆ ವಿಶೇಷ ಹೊಳಪು ನೀಡುತ್ತದೆ.
ಕೂದಲು ಉದುರುವ ಸಮಸ್ಯೆಗೆ ಪರಿಹಾರ ಬೇಕಾದಲ್ಲಿ ಚಹಾ ಪುಡಿ ಬೇಯಿಸಿದ ನೀರು ಮತ್ತು ಆಲೋವಿರ ಜೆಲ್ ಮಿಶ್ರಣವನ್ನು ಕೂದಲಿಗೆ ಹಚ್ಚಬೇಕು.
ಚಹಾ ಪುಡಿ ಬೇಯಿಸಿದ ನೀರು ಮತ್ತು ಆಲೋವಿರ ಜೆಲ್ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ನಳನಳಿಸುತ್ತದೆ.
ಈ ಮಿಶ್ರಣ ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ.
ಈ ಮಿಶ್ರಣವನ್ನು ನೆತ್ತಿಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು.
ನೆತ್ತಿಯ ರಕ್ತ ಪರಿಚಲನೆ ಸರಾಗವಾಗಿ ಆಗಲು ಈ ಮಿಶ್ರಣ ಸಹಾಯ ಮಾಡುತ್ತದೆ.
ಮೆಹೆಂದಿಯಲ್ಲಿ ಚಹಾ ಹುಡಿ ಬೇಯಿಸಿದ ನೀರು ಹಾಕಿ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.
ಸೂಚನೆ :ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.