ಹಲ್ಲುನೋವಿಗೆ ಶಾಶ್ವತ ಉಪಶಮನ ನೀಡುವ ಮನೆಮದ್ದುಗಳು

Bhavishya Shetty
Aug 28,2023

ಹಲ್ಲುನೋವಿಗೆ ಮನೆಮದ್ದು

ಹಲ್ಲುನೋವಿಗೆ ಹಲವು ಕಾರಣಗಳಿರಬಹುದು, ಆದರೆ ಹಲ್ಲುನೋವಿನ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳಿವೆ.

ಹಲ್ಲುನೋವಿಗೆ ಮನೆಮದ್ದು

ನಾವಿಂದು ಹೇಳುವ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ನೀವು ಹಲ್ಲುನೋವಿನಿಂದ ಶಾಶ್ವತ ಮತ್ತು ತಕ್ಷಣ ಪರಿಹಾರವನ್ನು ಪಡೆಯಬಹುದು.

ಕಲ್ಲು ಉಪ್ಪು

ಕಲ್ಲು ಉಪ್ಪನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯಲ್ಲಿರುವ ಎಲ್ಲಾ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಜೊತೆಗೆ ನೋವಿನಿಂದ ಸಾಕಷ್ಟು ಪರಿಹಾರವನ್ನು ಪಡೆಯಬಹುದು.

ಐಸ್ ಪ್ಯಾಕ್

ಹಲ್ಲು ನೋವಿದ್ದ ಜಾಗಕ್ಕೆ ಐಸ್ ಪ್ಯಾಕ್ ಅನ್ನು ಸಹ ಇಡಬಹುದು. ಐಸ್ ಪ್ಯಾಕ್ ಸುಲಭವಾದ ಚಿಕಿತ್ಸಾ ವಿಧಾನವೆಂದು ಪರಿಗಣಿಸಲಾಗುತ್ತದೆ.

ತ್ರಿಫಲ ಪುಡಿ

ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ತ್ರಿಫಲ ಪುಡಿಯನ್ನು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಹಲ್ಲುನೋವು ಕಡಿಮೆಯಾಗುತ್ತದೆ.

ಇಂಗು-ನಿಂಬೆ

2 ಚಿಟಿಕೆ ಇಂಗುಗೆ 1 ಚಮಚ ನಿಂಬೆಯನ್ನು ಬೆರೆಸಿ ಪೇಸ್ಟ್ ಮಾಡಿ ಮತ್ತು ನೋವು ಇರುವಲ್ಲಿ ಹತ್ತಿ ಉಂಡೆಯ ಸಹಾಯದಿಂದ ಹಚ್ಚಿ. ಇಂಗು ಮತ್ತು ನಿಂಬೆ ಹಲ್ಲಿನ ನೋವಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಈರುಳ್ಳಿ

ಹಸಿ ಈರುಳ್ಳಿಯ ತುಂಡನ್ನು ಹಲ್ಲುಗಳ ನಡುವೆ ಇಟ್ಟುಕೊಂಡು ಜಗಿದರೆ ತಕ್ಷಣ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ

ಲವಂಗ ಎಣ್ಣೆ

ಅನೇಕ ಜನರು ಮಾಡುವ ಮನೆಮದ್ದು ಇದು. ಹಲ್ಲುನೋವು ಕಡಿಮೆಯಾಗಲು ಅಥವಾ ಊತವನ್ನು ನಿವಾರಿಸಲು ಲವಂಗದ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ನೋವು ಇರುವಲ್ಲಿ ಹಚ್ಚಬೇಕು. ಇದು ಸ್ವಲ್ಪ ಸಮಯದಲ್ಲೇ ಪರಿಹಾರವನ್ನು ನೀಡುತ್ತದೆ.

ಬೆಳ್ಳುಳ್ಳಿ

ಹಲ್ಲು ನೋವಿಗೆ ಬೆಳ್ಳುಳ್ಳಿ ಕೂಡ ತುಂಬಾ ಪರಿಣಾಮಕಾರಿ. ಇದು ಆಂಟಿಬಯೋಟಿಕ್ ಗುಣಗಳನ್ನು ಹೊಂದಿದೆ. ಹಲ್ಲುನೋವು ಕಡಿಮೆ ಮಾಡಲು ಕೆಲವು ಎಸಳುಗಳನ್ನು ರುಬ್ಬಿಕೊಂಡು, ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ನೋವಿರುವ ಜಾಗಕ್ಕೆ ಹಚ್ಚಬೇಕು.

ಪೇರಲ ಎಲೆ

ಪೇರಲ ಎಲೆಗಳನ್ನು ನೀರಿನಲ್ಲಿ ಕುದಿಸಿ, ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ, ನೋವಿನಿಂದ ತ್ವರಿತ ಪರಿಹಾರವನ್ನು ಪಡೆಯಬಹುದು. ಎಲೆಯನ್ನು ಜಗಿದು ಸ್ವಲ್ಪ ಸಮಯದ ನಂತರ ಉಗುಳಿದರೂ ಪರಿಹಾರ ಸಿಗುತ್ತದೆ.


(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story