ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿಯೊಂದೇ ಅತ್ಯುತ್ತಮ ಪರಿಹಾರ
ತುಳಸಿ ಎಲೆಗಳಲ್ಲಿ ಸೂಕ್ಷ್ಮಾಣುಗಳಿರುವ ಗಾಳಿಯನ್ನು ಶುದ್ಧೀಕರಿಸುವ ವಿಶೇಷ ತೈಲವಿದೆ.ತುಳಸಿ ರಸ ಮತ್ತು ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.
ತುಳಸಿ ರಸ ಸೇವನೆಯಿಂದ, ಇಲ್ಲವೇ ತುಳಸಿ ಎಲೆಯನ್ನು ಜಗಿದು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಅವುಗಳೆಂದರೆ...
ತುಳಸಿ ಸೇವನೆಯಿಂದ ಶಕ್ತಿ, ತೀಕ್ಷ್ಣತೆ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ಪ್ರತಿದಿನ ಕೆಲವು ತುಳಸಿ ಎಲೆಗಳನ್ನು ತಿಂದರೆ ಉಸಿರಿನ ದುರ್ವಾಸನೆಯಿಂದ ಮುಕ್ತಿ ಪಡೆಯಬಹುದು.
ತುಳಸಿ ಚಹಾವನ್ನು ಕುಡಿಯುವುದರಿಂದ ಜ್ವರ, ಆಲಸ್ಯದಂತಹ ರೋಗಗಳಿಂದ ಪರಿಹಾರ ಪಡೆಯಬಹುದು.
ತುಳಸಿ ಎಲೆಗಳ ರಸವನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಮತ್ತು ಮೊಡವೆ ನಿವಾರಣೆಯಾಗುತ್ತದೆ.
ತುಳಸಿ ರಸಕ್ಕೆ ಉಪ್ಪು ಸೇರಿಸಿ ಮೂಗಿಗೆ ಹಾಕಿದರೆ ಮೂರ್ಛೆ ಸಮಸ್ಯೆ ದೂರವಾಗುತ್ತದೆ.
ನಿಯಮಿತವಾಗಿ ತುಳಸಿ ರಸ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು.
ತುಳಸಿ ರಸ ಸೇವನೆ, ತುಳಸಿ ಎಲೆ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.