ಒಂದು ಹಿಡಿ ಹೆಸರು ಕಾಲು 45 ದಿನಗಳಲ್ಲಿ ದೇಹ ತೂಕವನ್ನು ಇಳಿಸಿ ಬಿಡುತ್ತದೆ. ಇದರಲ್ಲಿ ಫೈಬರ್ ಮಾತ್ರವಲ್ಲದೆ, ಅನೇಕ ಪೋಷಕ ತತ್ವಗಳು ಅಡಗಿರುತ್ತವೆ.
ಸಣ್ಣಗಾಗಲು ಹೆಸರು ಕಾಕಾಳು ಸೇವನೆ ಅತ್ಯಂತ ಸುಲಭ ಮಾರ್ಗ. ಇದಕ್ಕಾಗಿ ಹೆಸರು ಕಾಳನ್ನು ನೀರಿನಲ್ಲಿ ನೆನೆಸಿ ಹಾಗೆಯೇ ಸೇವಿಸಬಹುದು. ಅಥವಾ ಪಲ್ಯ ಮಾಡಿ ತಿನ್ನಬಹುದು.
ಹೆಸರು ಕಾಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಇರುತ್ತದೆ. ಇದು ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ.
ಇದರಿಂದ ಜೀರ್ಣ ಕ್ರಿಯೆ ಸುಧಾರಿಸುತ್ತದೆ. ಈ ಮೂಲಕ ಹೊಟ್ಟೆ ಸ್ವಚ್ಚವಾಗುವುದು.
ಹೆಸರು ಕಾಳಿನಲ್ಲಿ ಕೊಲಿಸಿಸ್ತೋಕೈನಿನ್ ಎನ್ನುವ ಹಾರ್ಮೋನ್ ಇರುತ್ತದೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಚಯಾಪಚಯ ಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ. ಇದರಿಂದಾಗಿ ತೂಕ ಕೂಡಾ ಇಳಿಯುತ್ತದೆ.
ಇದು ವಿಟಮಿನ್, ಮಿನರಲ್ ಮುಂತಾದ ಪೋಷಕ ತತ್ವಗಳಿಂದ ತುಂಬಿರುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಿರುವ ಶಕ್ತಿ ಸಿಗುತ್ತದೆ.
ಇದರಲ್ಲಿ ಐರನ್ ಅಂಶ ಕೂಡಾ ಹೇರಳವಾಗಿದ್ದು, ಹಿಮೊಗ್ಲೋಬಿನ್ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ