ಕೂದಲಿಗೆ ಎಣ್ಣೆ ಹಚ್ಚಿದರೆ ಮಾತ್ರ ಉದ್ದನೆ ಬೆಳೆಯುತ್ತದೆ. ಅದರಲ್ಲಿಯೂ ಹರಳೆಣ್ಣೆ ಹಚ್ಚಿದರೆ ಕೂದಲ ಆರೋಗ್ಯ ಉತ್ತಮವಾಗಿರುತ್ತದೆ.
ಹರಳೆಣ್ಣೆ ಹಚ್ಚುವುದರಿಂದ ಕೂದಲು ಬೇರಿನಿಂದಲೇ ಬಲಗೊಳ್ಳುತ್ತದೆ. ಉದುರುವುದಿಲ್ಲ.
ಕೂದಲಿಗೆ ಅಗತ್ಯ ಪೋಷಣೆಯನ್ನು ಹರಳೆಣ್ಣೆ ನೀಡುತ್ತದೆ. ಹೀಗಾಗಿ ಕೂದಲು ಉದ್ದನೆ ಬೆಳೆಯುತ್ತದೆ.
ಈ ಎಣ್ಣೆ ಆಂಟಿಮೈಕ್ರೊಬಿಯಲ್ ಗುಣ ಲಕ್ಷಣಗಳನ್ನು ಹೊಂದಿದ್ದು, ಸೋಂಕನ್ನು ತೆಗೆದು ಹಾಕುತ್ತದೆ.
ಇದು ಕೂದಲನ್ನು ತೇವವನ್ನು ಹಾಗೆಯೇ ಉಳಿಸುತ್ತದೆ. ಕೂದಲು ಮೃದುವಾಗಿ ಇರುವಂತೆ ಮಾಡುತ್ತದೆ.
ಹರಳೆಣ್ಣೆ ವಿಟಮಿನ್ ಇ, ಅಮೈನೋ ಆಮ್ಲ, ಮತ್ತು ಒಮೆಗಾ 6 ಅನ್ನು ಒಳಗೊಂಡಿದೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ.
ಇದು ಕೂದಲಿನ ಬೆಳೆವಣಿಗೆಯನ್ನು ಸುಧಾರಿಸುತ್ತದೆ. ಕೂದಲು ದಪ್ಪವಾಗುವಂತೆ ಮಾಡುತ್ತದೆ.
ಇದನ್ನು ನೇರವಾಗಿ ಹಾಗೆಯೇ ಹಚ್ಚುವ ಬದಲು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯ ಜೊತೆ ಬೆರೆಸಿ ಹಚ್ಚಬೇಕು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.