ಗಡಿಯಾರ

ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಹಾಕಿದರೆ ಶುಭ ಗೊತ್ತೇ..!

Chetana Devarmani
Aug 21,2024

ಯಾವ ದಿಕ್ಕಿಗೆ ಹಾಕಿದರೆ ಶುಭ

ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರವನ್ನು ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಗಡಿಯಾರವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ನೇತು ಹಾಕಬಾರದು.

ದಕ್ಷಿಣ ದಿಕ್ಕಿನಲ್ಲಿ ಇಡಬಾರದು

ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಹಾಗಾಗಿ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು.

ಪಶ್ಚಿಮದಲ್ಲಿ ಇಡಬಹುದೇ?

ಗಡಿಯಾರವನ್ನು ಇಡಲು ಪಶ್ಚಿಮ ದಿಕ್ಕು ಸಹ ಅಷ್ಟೊಂದು ಸೂಕ್ತವಲ್ಲ. ಆದರೆ ಗಡಿಯಾರವನ್ನು ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಇಡಲು ಸ್ಥಳವಿಲ್ಲದಿದ್ದಾಗ ಮಾತ್ರ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು

ಈ ದಿಕ್ಕಿನಲ್ಲಿ ಇರಿಸುವುದು ಮಂಗಳಕರ

ಗಡಿಯಾರವನ್ನು ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಇರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಸ್ಥಿರವಾಗಿರಿಸುತ್ತದೆ.

ಇದು ಅಶುಭ

ಮನೆಯ ಮುಖ್ಯ ಬಾಗಿಲಿನ ಮೇಲೆ ಗಡಿಯಾರವನ್ನು ಇಡಬಾರದು. ಇದು ಅಶುಭವೆಂದು ಪರಿಗಣಿಸಲಾಗಿದೆ. ಮನೆಯ ಯಾವುದೇ ಬಾಗಿಲಿನ ಮೇಲೆ ಗಡಿಯಾರವನ್ನು ಇಡಬಾರದು.

ಇದು ಹಾನಿ ಉಂಟುಮಾಡುವುದು

ಮಲಗುವ ಹಾಸಿಗೆಯ ಗೋಡೆಯ ಮೇಲೆ ಗಡಿಯಾರವನ್ನು ಇಡಬಾರದು. ಇದು ಹಾನಿ ಉಂಟುಮಾಡಬಹುದು. ಅಶುಭವೆಂದು ಪರಿಗಣಿಸಲಾಗಿದೆ.

ಗಡಿಯಾರ ನಿಂತು ಹೋದರೆ!

ಮನೆಯಲ್ಲಿ ಗಡಿಯಾರವನ್ನು ಹೊಂದಿದ್ದರೆ ಅದು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ನೋಡಬೇಕು. ಗಡಿಯಾರ ತಿರುಗುವುದನ್ನು ನಿಲ್ಲಿಸಿದರೆ ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ.

ಗಡಿಯಾರ ಒಡೆದರೆ!

ಗಡಿಯಾರ ಒಡೆದರೆ, ಬಿರುಕು ಬಿಟ್ಟರೆ ಅಥವಾ ಹಾಳಾಗಿದ್ದರೆ ಮನೆಯಲ್ಲಿ ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುರಿದ ಅಥವಾ ಹಾನಿಗೊಳಗಾದ ಗಡಿಯಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಡಿಯಾರದ ಬಣ್ಣವೂ ಮುಖ್ಯ

ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಅಳವಡಿಸಿರುವ ಗಡಿಯಾರದ ಬಣ್ಣವೂ ಮುಖ್ಯವಾಗಿದೆ. ಮರದ, ಗಾಢ ಹಸಿರು ಗಡಿಯಾರ, ತಿಳಿ ಬೂದು, ಕಂದು ಬಣ್ಣದ ಗಡಿಯಾರವನ್ನು ಆಯ್ಕೆ ಮಾಡಬಹುದು. ಬಿಳಿ, ಆಕಾಶ ನೀಲಿ, ತಿಳಿ ಹಸಿರು, ಕೆನೆ ಬಣ್ಣದ ಗಡಿಯಾರ ಹಾಕಬಾರದು.

VIEW ALL

Read Next Story